ದೇವನಹಳ್ಳಿ: ಸಮಾಜದ ಗಣ್ಯ ವ್ಯಕ್ತಿಗಳು ಪೋಷಕರು ಗ್ರಾಮಸ್ಥರು ಎಸ್ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ಕೈಜೋಡಿಸಿದರೆ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಮಾಜಿ ಪುರಸಭಾ ಅಧ್ಯಕ್ಷ ಸಿ.ಜಗನ್ನಾಥ್ ತಿಳಿಸಿದರು.
ಪಟ್ಟಣದ ಬಿಬಿ ರಸ್ತೆಯಲ್ಲಿರುವ ಕೊರಚರಪಾಳ್ಯ ಶಾಲೆಯು ನೂರು ವರ್ಷಗಳ ಇತಿಹಾಸ ಇರುವ ಶಾಲೆ. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು ಆದರೆ ಈ ಶಾಲೆಯು ಖಾಸಗಿ ಶಾಲೆಗಳಿಗಿಂತಲೂ ಯಾವುದರಲ್ಲೂ ಕಡಿಮೆ ಇಲ್ಲದಂತೆ ಎಲ್ಲಾ ಸೌಲಭ್ಯಗಳು ಕಲ್ಪಿಸಿಕೊಡಲಾಗಿದೆ ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಶಿಕ್ಷಕಿಯರು ತೊಡಗಿಸಿಕೊಳ್ಳುವಿಕೆ ಮತ್ತು ಮಕ್ಕಳ ಶಿಸ್ತು ಬಹಳ ಖುಷಿ ಕೊಟ್ಟಿದೆ ಎಂದರು.
ಇದೇ ಸಂದರ್ಭದಲ್ಲಿ ಶಿವನಾಪುರದ ರಮೇಶ್. ತೇಜಾ ನರ್ಸರಿ ಮಾಲೀಕರು, ಶ್ರೀ ರಾಮಯ್ಯ ನಿವೃತ್ತ ಮುಖ್ಯ ಶಿಕ್ಷಕರು, ಡಿ ಶಶಿಧರ್ ಕ್ರೀಡಾ ಸಾಂಸ್ಕೃತಿ ಸಂಘ ಮಾಜಿ ಅಧ್ಯಕ್ಷರು, ಗೋಪಿ ಪುರಸಭಾ ಸದಸ್ಯರು, ನರಸಿಂಹಮೂರ್ತಿ ಪುರಸಭಾ ಮಾಜಿ ಅಧ್ಯಕ್ಷರು, ವೇಣುಗೋಪಾಲ್ ಜೆ ಸಿ ನಿಕಟ ಪೂರ್ವ ಅಧ್ಯಕ್ಷರು, ಎಂ ಆನಂದ್ ಜೆ ಸಿ ಪೂರ್ವ ಅಧ್ಯಕ್ಷರು ಪುಟ್ಟಸ್ವಾಮಿ ಮುಖ್ಯ ಶಿಕ್ಷಕರು, ರಶ್ಮಿ ಎಸ್ ಡಿ ಎಂ ಸಿ ಅಧ್ಯಕ್ಷರು, ವೇಣುಗೋಪಾಲ್ ಉಪಾಧ್ಯಕ್ಷರು, ಶಾಲಾ ನಿರ್ದೇಶಕರು, ಶಿಕ್ಷಕಿಯರು ಹಾಜರಿದ್ದರು.