ಮಾಗಡಿ: ನಾನು ಕೇವಲ ಶಾಸಕನಾಗಿಯೇ ಇರಬೇಕು ಎಂಬ ಸ್ಥಾರ್ಥ ನನ್ನಲ್ಲಿದ್ದಿದ್ದರೆ ಜೆಡಿಎಸ್ ಪಕ್ಷದಲ್ಲಿಯೇ ಇರುತ್ತಿದ್ದೆ ಎಂದು ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಹಾಲಸಿಂಗನಹಳ್ಳಿಯಲ್ಲಿ ಎಂ.ಎಲ್.ಸಿ.ಎಸ್.ರವಿರವರ ಅನುದಾನದಡಿಯಲ್ಲಿ ನಿರ್ಮಾಣಗೊಂಡಿರುವ ನೂತನ ಶುಧ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ಮಾಜಿ ಶಾಸಕನಾದರೂ ಸಹ ಈ ಗ್ರಾಮದ ಜನರ ಬಹಳ ವರ್ಷಗಳ ಬೇಡಿಕೆಯಾದ ನೀರಿನ ಘಟಕ ಸ್ಥಾಪಿಸಲು ಈ ಗ್ರಾಮದ ತಿಮ್ಮಪ್ಪ, ಹೂಜಗಲ್ಲು ಅರುಣ್, ಕಲ್ಯಾ ನಾರಾಯಣಪ್ಪ ಅವರ ಮನವಿ ಮೇರೆಗೆ ಇದನ್ನು ಸ್ಥಾಪಿಸಲಾಯಿತು.ನಾನು ಜೆಡಿಎಸ್ ಪಕ್ಷವನ್ನು ಏಕೆ ಬಿಟ್ಟೇ ಎಂದರೆ ಅಲ್ಲಿ ಶಾಸಕನಾಗಿರಬಹುದು ಆದರೆ ಅಭಿವೃದ್ಧಿ ಅಸಾದ್ಯದ ಮಾತು.ನಾನು ಮಾಜಿಯಾದರೂ ನೀರಿನ ಘಟಕ ಸ್ಥಾಪಿಸಲು ಕಾರಣ ಕಾಂಗ್ರೆಸ್ ಪಕ್ಷವಾಗಿದೆ.
ನಮ್ಮ ಪಕ್ಷದಲ್ಲಿ ಸುಮಾರು ಇಪ್ಪತ್ತೈದು ಜನರು ವಿಧಾನಪರಿಷತ್ ಸದಸ್ಯರಿದ್ದಾರೆ.ಇಲ್ಲಿ ನೀರಿನ ಘಟಕ ಸ್ಥಾಪಿಸಲು ವಿಧಾನಪರಿಷತ್ ಸದಸ್ಯರಾದ ರವಿರವರಿಗೆ ಮನವಿ ಮಾಡಿದ್ದಕ್ಕೆ ಈ ಘಟಕ ಸ್ಥಾಪನೆಯಾಗಲು ಕಾರಣವಾಗಿದೆ.ಇದಕ್ಕೆ ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಬಾಲಕೃಷ್ಣ ತಿಳಿಸಿದರು.
ತಾಲ್ಲೂಕಿನ ಪ್ರಭುದ್ದ ಮತದಾರರು ಒಂದು ಜಾತಿಗೆ ಸೀಮಿತವಾಗಬಾರದು.ಒಂದು ಜಾತಿಗೆ ಸೀಮಿತವಾಗಿ ಅವರನ್ನು ಬೆಂಬಲಿಸಿದರೆ ಅವರು ಅವರ ಕುಟುಂಬ ಉದ್ದಾರವಾಗುತ್ತದೆಯೇ ಹೊರತು ತಾಲ್ಲೂಕು ಜಿಲ್ಲೆ ಅಭಿವೃದ್ಧಿಯಾಗುವುದಿಲ್ಲ.ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿ ಸಮುದಾಯದ ಮುಖಂಡರಿದ್ದು ಎಲ್ಲಾ ಸಮುದಾಯದ ನಾಯಕರಿಗೂ ರಾಜಕೀಯ ಸ್ಥಾಮಮಾನ ದೊರಕಿದೆ.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಳೆದ ಚುನಾವಣೆಯ ತಮ್ಮ ಪ್ರಣಾಳಿಕೆಯಲ್ಲಿ ಸ್ತ್ರೀ ಶಕ್ತಿ ಸಂಘದವರ ಸಾಲಮನ್ನಾ,
ವೃದ್ದಾಪ್ಯ ವೇತನ 5000 ರೂ ನೀಡಿಕೆ, ನಿರುದ್ಯೋಗ ಸಮಸ್ಯೆ ನಿವಾರಣೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿಕೆ ನೀಡಿದ್ದರು.ಆದರೆ ಇವೆಲ್ಲ ಭರವಸೆಗಳನ್ನು ಈಡೇರಿಸುವಲ್ಲಿ ವಿಪಲವಾದರು.ಈಗ ಹೇಳುತ್ತಿದ್ದಾರೆ ನಮಗೆ ಸ್ಪಷ್ಟ ಬಹುಮತ ಬರಲಿಲ್ಲ ಆದಕಾರಣವಾಗಿ ಇವೆಲ್ಲವನ್ನೂ ಈಡೇರಿಸಲಾಗುತ್ತಿಲ್ಲ ಎಂಬ ಜಾರಿಕೆ ಉತ್ತರ ನೀಡುತ್ತಿದ್ದಾರೆ ಎಂದ ಅವರು ಇದೀಗ ಮುಂದೆ ಬರುವ ಚುನಾವಣೆಯಲ್ಲಿ ಇನ್ನೂರು ಯುನಿಟ್ ಕರೆಂಟ್ ಉಚಿತ, ಹತ್ತು ಕೆ.ಜಿ.ಅಕ್ಕಿ, ಖಚಿತ, ಮನೆಯೊಡತಿ ಖಾತೆಗೆ ಎರಡು ಸಾವಿರ ನೀಡಿಕೆ, ಜೊತೆಗೆ ಇನ್ನೊಂದು ಹೊಸ ಭರವಸೆಯಾದ ನಿರುದ್ಯೋಗಿಗಳಿಗೆ ಮೂರುಸಾವಿರ ರೂ ನೀಡಲು ಮುಂದಾಗಿದ್ದೇವೆ.
ನಾನು ಸುಳ್ಳು ಆಶ್ವಾಸನೆ, ಪೊಳ್ಳು ಭರವಸೆ ನೀಡುವುದಿಲ್ಲ.ಏಕೆಂದರೆ ಕಳೆದ ಸಿದ್ದರಾಮಯ್ಯ ಸರಕಾರವು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಎಲ್ಲಾ ಕಾರ್ಯಕ್ರಗಳನ್ನು ಈಡೇರಿಸಲಾಗಿದೆ.ಆದಕಾರಣವಾಗಿ ನಮ್ಮ ಮೇಲಿನ ನಂಬಿಕೆ ಜನರಿಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದ್ದು ಈ ಕ್ಷೇತ್ರದ ಮನೆ ಮಗನಾದ ನನಗೆ ನೀವು ಆಶೀರ್ವದಿಸಬೇಕೆಂದು ಬಾಲಕೃಷ್ಣ ಮನವಿ ಮಾಡಿದರು.
ದಿಶಾಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಜಿಪಂ ಮಾಜಿ ಸದಸ್ಯ ಕಲ್ಯಾ ಜಯಶಂಕರ್, ತಾಪಂ ಮಾಜಿ ಅದ್ಯಕ್ಷ ನಾರಾಯಣಪ್ಪ, ಮಣಿಗನಹಳ್ಳಿ ಸುರೇಶ್, ಗ್ರಾಪಂ ಸದಸ್ಯರಾದ ಚಂದ್ರಕಲಾ ಅರುಣ್, ಬಸವೇನಹಳ್ಳಿ ಕುಮಾರ್, ಮುಖಂಡರಾದ ಕೋಡಿಪಾಳ್ಯ ಚಾಮೇಗೌಡ, ಮೀಸೆ ರಾಮಣ್ಣ, ಹನುಮಂತಪುರ ಶಿವು, ಕೆಂಪೇಗೌಡ, ಬೈಚಾಪುರ ಕಿರಣ್, ರಮೇಶ್, ನರಸಿಂಹಮೂರ್ತಿ, ರೇವಣ್ಣ, ನವೀನ್ ಸೇರಿದಂತೆ ಮತ್ತಿತರಿದ್ದರು.
Leave a Review