ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶವನ್ನು ಅಬ್ಬರಿಸಲು ಅದೆಷ್ಟೋ ಯುವ ಆಟಗಾರರು ಕಾಯುತ್ತಲೇ ಇರುತ್ತಾರೆ. ಆದರೆ ಸಿಕ್ಕ ಅವಾಕಶದಲ್ಲಿ ಬ್ಯಾಟ್ ಮೌನಕ್ಕೆ ಶರಣಾದರೆ ಆಗುವ ನಿರಾಸೆ ಅಷ್ಟಿಷ್ಟಲ್ಲ. ಟೀಮ್ ಇಂಡಿಯಾದ ಸ್ಥಾನ ಪಡೆಯುವ ಕನಸಿನಿಂದ ದೇಶೀಯ ಟೂರ್ನಿಗಳಲ್ಲಿ ಅಬ್ಬರಿಸಿ ಟೆಸ್ಟ್ ಕ್ಯಾಪ್ ಪಡೆದ ಪ್ಲೇಯರ್ ರಜತ್ ಪಟಿದಾರ್.
ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಫಲವಾಗಿ ರಜತ್ ಪಟಿದಾರ್ಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿತು. ಇವರು ಇಂಗ್ಲೆಂಡ್ ಲಯನ್ಸ್ ವಿರುದ್ಧ ಸೊಗಸಾದ ಪ್ರದರ್ಶನ ನೀಡಿದರು. ಅಲ್ಲದೆ ತಂಡದ ಜಯದಲ್ಲಿ ಮಿಂಚುವಂತೆ ಆಟವಾಡಿದರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಕೌಟುಂಬಿಕ ಕಾರಣಗಳಿಂದ ತಂಡದಿಂದ ಹೊರನಡೆದರು. ಇವರ ಸ್ಥಾನಕ್ಕೆ ಕೊನೆಯ ಕ್ಷಣದಲ್ಲಿ ಆಯ್ಕೆದಾರರು ರಜತ್ ಪಟಿದಾರ್ ಅವರಿಗೆ ಮಣೆ ಹಾಕಿದರು. ಆದರೆ ಮೊದಲ ಟೆಸ್ಟ್ನಲ್ಲಿ ಇವರಿಗೆ ಆಡುವ ಅವಕಾಶ ಲಭಿಸಲಿಲ್ಲ. ಆದರೆ ವಿಶಾಖಪಟ್ಟಣಂ ಟೆಸ್ಟ್ನಲ್ಲಿ ಆಡುವ ಅವಕಾಶವನ್ನು ಪಡೆದರು.