ವಾಷಿಂಗ್ಟನ್: ತೈಲ ಬೆಲೆ ಏರಿಕೆಯಾದರೆ ಅಮೆರಿಕ ಬಹಳಷ್ಟು ಲಾಭಗಳಿಸಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತಮ್ಮ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, ಅಮೆರಿಕ ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದೆ. ತೈಲ ಬೆಲೆಗಳು ಏರಿದಾಗ ನಾವು ಬಹಳಷ್ಟು ಹಣವನ್ನು ಗಳಿಸುತ್ತೇವೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ತಡೆಯುವುದು ನನ್ನ ಮೊದಲ ಆದ್ಯತೆ ಎಂದು ಬರೆದಿದ್ದಾರೆ.
ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಮಧ್ಯಪ್ರಾಚ್ಯ ಮತ್ತು ವಾಸ್ತವವಾಗಿ ಜಗತ್ತನ್ನು ನಾಶಪಡಿಸಲು ಹೊರಟಿರುವ ಇರಾನ್ನನ್ನು ತಡೆಯತ್ತೇನೆ. ಎಂದಿಗೂ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ ಎಂದಿದ್ದಾರೆ.
ತೈಲಬೆಲೆ ಏರಿಕೆಯಾದರೆ ಅಮೆರಿಕಕ್ಕೆ ಲಾಭ



