ಚನ್ನರಾಯಪಟ್ಟಣ: ಶಾಲಾ ಮಕ್ಕಳಲ್ಲಿ ಪೊಲೀಸ್ ಠಾಣೆ ಬಗ್ಗೆ ಅರಿವು ಮೂಡಿಸಿದರೆ ಅವರಲ್ಲಿರುವ ಅಂಜಿಕೆ ದೂರವಾಗುತ್ತದೆ ಎಂದು ಶಾಲಾ ಮುಖ್ಯ ಶಿಕ್ಷಕ ಮುನೇಗೌಡ ಹೇಳಿದರು.
ದೇವನಹಳ್ಳಿ ತಾಲೂಕು ಗಂಗವಾರ ಸನ್ ರೈಸ್ ಇಂಟರ್ನ್ಯಾಷನಲ್ ಶಾಲಾ ಮಕ್ಕಳು ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಮಕ್ಕಳಿಗೆ ಠಾಣೆಯಬಗ್ಗೆ ವಿವರವಾಗಿ ತಿಳಿಸಿಕೊಟ್ಟರು ಪೊಲೀಸ್ ಠಾಣೆ ಎಂದರೆ ಅಪರಾಧಮಾಡಿದರೆ ಠಾಣೆಯಲ್ಲಿ ಜೈಲು ಬಂದೂಕು ಇರುವುದನ್ನು ವಿವರವಾಗಿ ತಿಳಿಸಿದರು ಮಕ್ಕಳಲ್ಲಿ ಒಳ್ಳೆಯರಿಗೂ ಮೂಡಿಸಬೇಕು ಮುಂದಿನ ದಿನಳಲ್ಲಿ ಯಾವುದೇ ಕಾರಣಕ್ಕೂ ಚಟುವಟಿಕೆಗಳು ಮಾಡದಂತೆ ಬುದ್ಧಿವಾದ ಹೇಳಬೇಕು ಇದರಿಂದ ಮಕ್ಕಳಿಗೆ ಸಾಮಾನ್ಯ ಜ್ಞಾನ ಹೆಚ್ಚುತ್ತದೆ ಎಂದರು.
ಪೊಲೀಸ್ ನಾರಾಯಣಸ್ವಾಮಿ ಮಾತನಾಡಿ ಠಾಣೆ ಎಂದರೆ ಅಪರಾಧ ಪ್ರಕರಣಗಳಿಗೆ ಅಷ್ಟೇ ಅಲ್ಲ ಕಾಲೇಜು ವಿದ್ಯಾರ್ಥಿಗಳು ಪಾಸ್ಪೋರ್ಟ್ ಪೊಲೀಸ್ ಮಾಹಿತಿ ಸರ್ಟಿಫಿಕೇಟ್ ಪಡೆದುಕೊಳ್ಳುವುದಕ್ಕೆ ಪೊಲೀಸ್ ಠಾಣೆಗೆ ಬರುತ್ತಾರೆ ಕೆಟ್ಟದು ಮಾದ್ರೆ ಮಾತ್ರ ಅಲ್ಲ ಒಳ್ಳೆಯದಕ್ಕೂ ಪೊಲೀಸ್ ಠಾಣೆ ಇರುತ್ತದೆ ಪೊಲೀಸ್ ಎಂದರೆ ಸಾರ್ವಜನಿಕರೊಂದಿಗೆ ಸ್ನೇಹ ಬಾವ ಇಟ್ಟುಕೊಂಡರೆ ಒಳ್ಳೆಯ ಮನೋಭಾವ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಗಂಗವಾರ ಸನ್ ರೈಸ್ ಶಾಲೆಯ ಆಡಳಿತ ಮಂಡಳಿಯ ರಾಜಶೇಖರ್ ಶಾಲಾ ಶಿಕ್ಷಕಿ ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿ ಹಾಜರಿದ್ದರು.