ಮಾಗಡಿ: ಹಾವುಗಳು ರೈತರು ಬೆಳೆಯುವ ಪ್ರತಿಯೊಂದು ಬೆಳೆಯ ರಕ್ಷಣೆ ಮಾಡುತ್ತವೆ.ಅವುಗಳನ್ನು ನಾಶ ಮಾಡಿದರೆ ಕೆಲವೇ ಕೆಲವು ವರ್ಷಗಳಲ್ಲಿ ಮನುಷ್ಯನು ತಿನ್ನುವ ಆಹಾರಕ್ಕೆ ಆಹಾಕಾರ ಅನುಭವಿಸಬೇಕಾಗುತ್ತದೆ ಎಂದು ಯುವ ಉರಗ ತಜ್ಞರಾದ ಕಲ್ಯಾಗೇಟಿನ ಹನುಮಂತರಾವ್(ಸ್ನೇಕ್ ರಾಯ್)ಹೇಳಿದರು.
ಈ ಕುರಿತು ಸ್ಪಷ್ಠ ಮಾಹಿತಿ ನೀಡಿ ಮಾತನಾಡಿದ ಅವರು ನಾನು ಕಲ್ಯಾಗೇಟಿನ ಸರಕಾರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವಾಗಲೇ ಹಾವುಗಳನ್ನು ಹಿಡಿಯಬೇಕು ಎಂಬ ಹಂಬಲ ಬಂದಿತು.ಆದರೆ ಮಾಗಡಿ ತಾಲ್ಲೂಕಿನಲ್ಲಿ ಹಾವುಗಳನ್ನು ಹೇಗೆ ಹಿಡಿಯುವುದು ಯಾವ ರೀತಿಯಲ್ಲಿ ರಕ್ಷಣೆ ಮಾಡಬೇಕು ಎಂಬ ಮಾಹಿತಿಯನ್ನು ತಿಳಿಸಲು ಯಾರೂ ಇರಲಿಲ್ಲ.
ಈ ಸಂದರ್ಭದಲ್ಲಿ ಕಪ್ಪು ಬಿಳುಪು ಟಿವಿಯಲ್ಲಿ ಕೇರಳದ ಖ್ಯಾತ ಉರಗ ತಜ್ಞರಾದ “ವಾವಾ ಸುರೇಶ್”ಅವರು ಹಾವುಗಳನ್ನು ಹೇಗೆ ಹಿಡಿಯುವುದು ಯಾವ ರೀತಿಯಲ್ಲಿ ರಕ್ಷಿಸಬೇಕು.ಇವುಗಳಿಂದ ಮನುಕುಲಕ್ಕೆ ಏನೆಲ್ಲಾ ಪ್ರಯೋಜನ ಎಂಬ ಮಾಹಿತಿಯನ್ನು ನೀಡುವ ವಿಶೇಷ ಸಂದರ್ಶನದ ಮಾಹಿತಿಯನ್ನು ಇವರು ನೀಡಿದ ಮಾಹಿತಿಯನ್ನು ಗ್ರಹಿಕೆ ಮಾಡಿಕೊಂಡು ಮೊದಮೊದಲು ಸಣ್ಣಪುಟ್ಟ ಹಾವುಗಳನ್ನು ಹಿಡಿಯಲು ಯಶಸ್ವಿಯಾದೆ.ನನ್ನ 24 ನೇ ವಯಸ್ಸಿಗೆ ಮಾಗಡಿ ತಾಲೂಕಿನಾದ್ಯಂತ ಎಲ್ಲಾ ಜಾತಿಯ ಸರಿಸುಮಾರು 5384 ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದೇನೆ ಎಂದು ತಿಳಿಸಿದರು.
ಬಾಕ್ಸ್:”ನಾನು ಶ್ರೀಮತಿ ಮಂಜುಳಾಬಾಯಿ ಮಂಜುನಾಥ್ ರಾವ್ ದಂಪತಿಗಳ ಮಗನಾಗಿದ್ದು ನಮ್ಮ ತಂದೆ ನನ್ನ ಚಿಕ್ಕ ವಯಸ್ಸಿನಲ್ಲಿಯೇ ಧೈವಾಧಿನರಾದರು.ತಾಯಿ ಹಾಸ್ಟೆಲ್ಲಿನಲ್ಲಿ ಅಡುಗೆ ಕೆಲಸವನ್ನು ಮಾಡುತ್ತಾ ನನ್ನ ಸಾಕಿ ಸಲಹುತ್ತಿದ್ದಾರೆ.ಮೊದಮೊದಲು ಹವ್ಯಾಸಕ್ಕೆ ಈ ಕೆಲಸಕ್ಕೆ ಮುಂದಾಗಿದ್ದೆ.ಕಾಲಕ್ರಮೇಣ ಸಾಮಾಜಿಕ ಸೇವೆಯೇ ನನ್ನ ಗುರಿಯನ್ನಾಗಿರಿಸಿಕೊಂಡು ಸುಮಾರು ಎಂಟು ವರ್ಷಗಳಲ್ಲಿ ನಾಗರಹಾವು ಕೊಳಕಮಂಡಲ ಸೇರಿದಂತೆ ಎಲ್ಲಾ ಜಾತಿಯ 5384 ಹಾವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದೇನೆ.ಹಾವುಗಳನ್ನು ರಕ್ಷಿಸಿದರೆ ಮನುಕುಲದ ಉಳಿವು ಸಾಧ್ಯ.ಹಾವುಗಳನ್ನು ಕೊಲ್ಲಬೇಡಿ ರಕ್ಷಿಸಿ.
ಅವುಗಳನ್ನು ರಕ್ಷಿಸಿದರೆ ನಮ್ಮ ಭವಿಷ್ಯದ ರಕ್ಷಣೆ ಸಾಧ್ಯ.ಎಲ್ಲಿ ಎಷ್ಟೇ ಸಮಯದಲ್ಲಿ ಹಾವುಗಳು ಕಂಡರೆ ಕರೆಮಾಡಿ 7022867663 ಹನುಮಂತರಾವ್(ಸ್ನೇಕ್ ರಾಯ್)ಯುವ ಉರಗ ತಜ್ಞರು”.ಹಾವುಗಳು ನಾಲಿಗೆ ಗ್ರಹಿಕೆಯಿಂದ ಇಲ್ಲೇ ನಿಗಧಿತ ಸ್ಥಳದಲ್ಲಿ ತನ್ನ ಪ್ರೀತಿಯ ಆಹಾರವಾದ ಕಪ್ಪೆ ಮತ್ತು ಇಲಿಗಳನ್ನು ತಿನ್ನಲು ಬರುತ್ತವೆ.ಅವುಗಳು ನಿರ್ಧರಿಸಿದ ಸ್ಥಳಕ್ಕೆ ಆಗಮಿಸಿ ಆಹಾರ ಭಕ್ಷಿಸದೇ ಹಿಂತಿರುಗುವ ಪ್ರಶ್ನೆಯೇ ಇಲ್ಲ.ಇವುಗಳು ಶ್ರೀಮಂತರ ಮನೆಗೆ ಬರುವುದಿಲ್ಲ.ಹೆಂಚಿನಮನೆ ಶಾಲಾ ಕಾಲೇಜುಗಳ ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ.ಕಾರಣವಿಷ್ಟೆ ಶ್ರೀಮಂತರು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ಬಡವರು ಮತ್ತು ಶಾಲಾ ಕಾಲೇಜುಗಳಲ್ಲಿ ಸ್ವಚ್ಚತೆಯ ಕೊರತೆಯಿರುತ್ತದೆ.ಈ ಸ್ವಚ್ಚತೆ ಕೊರತೆಯ ಕಡೆಗಳಲ್ಲಿ ಇಲಿ ಕಪ್ಪೆಗಳು ವಾಸಿಸುತ್ತವೆ.ಆದಕಾರಣವಾಗಿ ಅವುಗಳ ಆಹಾರಕ್ಕಾಗಿ ಧಾವಿಸುವ ಹಾವುಗಳು ಈ ಜಾಗಗಳಲ್ಲಿ ಕಾಣ ಸಿಗುತ್ತವೆ.ಇಲಿಗಳು ಸಂತತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಾಧಾನ್ಯತೆ ಪಡೆದಿವೆ.ಒಂದು ಇಲಿ ಒಂದು ತಿಂಗಳಿಗೆ ಹದಿನೈದು ಇಲಿಗಳನ್ನು ಹಾಕುತ್ತವೆ.ಈ ಹದಿನೈದು ಇಲಿಗಳು ಮೂರು ತಿಂಗಳಲ್ಲಿ ಸಂತತಿ ಪ್ರಾರಂಭಿಸುತ್ತವೆ.ಒಂದು ವರ್ಷಕ್ಕೆ ನೂರಾರು ಇಲಿಗಳ ಸಂತತಿಯಾಗುತ್ತವೆ.ಇವುಗಳು ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಇವುಗಳನ್ನು ನಾಶ ಮಾಡುವ ಒಂದೇ ಒಂದು ಜೀವಿ ಎಂದರೆ ಹಾವು ಮಾತ್ರವಾಗಿದೆ.ಆದಕಾರಣವಾಗಿ ಹಾವುಗಳ ರಕ್ಷಣೆ ಮನುಷ್ಯನ ಆದ್ಯ ಕರ್ತವ್ಯವಾಗಿದೆ ಎಂದು ಹನುಮಂತರಾವ್ ಸ್ಪಷ್ಟಪಡಿಸಿದರು.