ಮೈಸೂರು (ಕೆ.ಆರ್.ನಗರ): ದೇಶದಲ್ಲಿ ಯಾವುದಾದರೂ ಒಂದು ಧರ್ಮ ಇದ್ದರೆ ಅದು ಸಂವಿಧಾನ ಹಾಗಾಗಿ ಸಂವಿಧಾನವನ್ನು ನಾವು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ವ್ಯಕ್ತ ಪಡಿಸಿದ್ದಾರೆ.
ಪಟ್ಟಣದ ಮೈಸೂರು-ಹಾಸನ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಆಶಯದಂತೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮಾನತೆಗಾಗಿ ಸಮಸಮಾಜ ನಿರ್ಮಾಣ ಮಾಡಲು ರಚಿಸಿದ ಸಂವಿಧಾನದ ಅಡಿಯಲ್ಲಿ ಬದುಕಬೇಕು ಎಂಬುದನ್ನು ಹೇಳಲಾಗಿದೆ ಎಂದರು. ದೇಶದಲ್ಲಿ ಯಾವುದಾದರೂ ಒಂದು ಧರ್ಮ ಇದ್ದರೆ ಅದು ಸಂವಿಧಾನ.
ಸಂವಿಧಾನವನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಒಂದು ಕೋಟಿ 32 ಲಕ್ಷ ಕುಟುಂಬಗಳ ಆರ್ಥಿಕ ಸ್ವಾವಲಂಬನೆಗಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಮಾದರಿ ರಾಜ್ಯವಾಗಿದೆ ಎಂದು ಸಮರ್ಥಿಸಿಕೊಂಡರು.
6 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಅಂಬೇಡ್ಕರ್ ಅವರ ಭವನಕ್ಕೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸುತ್ತಿದ್ದು ಇದರ ನಿರ್ವಹಣೆಗಾಗಿ ಆದಾಯ ಬರುವಂತ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಳ್ಳಿ. ಇದಕ್ಕೆ ಅಗತ್ಯವಿರುವ ಎಲ್ಲಾ ಅನುದಾನವನ್ನು ನಮ್ಮ ಅವಧಿಯಲ್ಲಿ ಬಿಡುಗಡೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಕರೆತಂದು ಉದ್ಘಾಟನೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ನಂತರ ಶಾಸಕ ಡಿ.ರವಿಶಂಕರ್ ಅವರು ಮಾತನಾಡಿ ಸಮಾಜ ಪರಿವರ್ತನೆಯಾಗಬೇಕಾದರೆ ಶಿಕ್ಷಣ ಮುಖ್ಯ ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡಿ ವಿದ್ಯಾವಂತರಾದಾಗ ಮಾತ್ರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ರಾಜಕೀಯವಾಗಿ ಮೇಲೆ ಬರಲು ಸಾಧ್ಯವಾಗಿದೆ ಅದನ್ನೇ ಡಾ. ಬಿಆರ್ ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ಉಲ್ಲೇಖನೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮಿ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದ ಸ್ಯರುಗಳಾದ ಸಿದ್ದಪ್ಪ, ರಾಜಯ್ಯ ಮಾತ ನಾಡಿದರು. ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಶಂಕರ್ ಸ್ವಾಮಿ, ತಹಸಿಲ್ದಾರ್ ಪೂರ್ಣಿಮಾ, ಇಓ ಹರೀಶ್, ಪುರಸಭೆ ಮುಖ್ಯಾ ಧಿಕಾರಿ ಡಾ. ಜಯಣ್ಣ, ಪಿಡಬ್ಲ್ಯೂಡಿ ಎಇಇ ಸುಮಿತ್ರ, ಬಿಇಓ ಕೃಷ್ಣಪ್ಪ, ಮುಂಖಡರುಗಳಾದ ಕಾಂತರಾಜ್, ಗೀತಾ ಮಹೇಶ್, ಶಾಂತಿರಾಜ್, ಸುನೀತಾ, ಎಂಎಸ್ ಮಹದೇವ್, ಎಂ ಜೆ ರಮೇಶ್, ಮಂಜು ರಾಜ್, ವೇಣು, ರಾಮಯ್ಯ, ರಾಚಯ್ಯ, ಸ್ವಾಮಿ, ಕಂಠಿ, ಕುಮಾರ್, ಮರಿಯಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.