ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಣಿಕೆ ಮಾಡುತ್ತಿದ್ದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ.
ಕೌಲಾಲಂಪುರದಿಂದ ಬಂದಿದ್ದ ವ್ಯಕ್ತಿಯೋರ್ವನ ಬಳಿ 86 ಗ್ರಾಂ ಚಿನ್ನ ಪತ್ತೆಯಾಗಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಪಾಸ್ಪೋರ್ಟ್ನ ಪೌಚ್ನಲ್ಲಿ ಚಿನ್ನ ಲೇಪನ ಮಾಡಿ ಸಾಗಾಣೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದ್ದು, ಸುಮಾರು 5 ಲಕ್ಷ 27 ಸಾವಿರ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.