ಬೆಂಗಳೂರು: ಜೀನ್ಸ್ ಮತ್ತು ಒಳಉಡುಪುಗಳಲ್ಲಿ ಬಚ್ಚಿಟ್ಟು 55 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೇಸ್ಟ್ ಅನ್ನು ಅಕ್ರಮವಾಗಿ
ಸಾಗಿಸುತ್ತಿದ್ದ ಖದೀಮನೊಬ್ಬನನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಕೊಡಗಿನ 24 ವರ್ಷದ ಯುವಕನನ್ನು ಬಂಧಿಸಲಾಗಿದೆ. ಕೊಡಗು ಮೂಲದವನಾದ ಯುವಕ ದುಬೈನಿಂದ ಇಂಡಿಗೋ ಏರ್ಲೈನ್ಸ್ ಫ್ಲೈಟ್ 6ಇ 1486 ಮೂಲಕ ಡಿ.10 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಯುವಕನನ್ನು ತಪಾಸಣೆಗೆ ಒಳಪಡಿಸಿದಾಗ ಚಿನ್ನ ಪತ್ತೆಯಾಗಿದೆ.
ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿರುವಾಗ, ಈ ಯುವಕನು ಅಸಹಜರೀತಿಯಾಗಿ ವರ್ತಿಸಲು ಆರಂಭಿಸಿದನು. ಇದರಿಂದ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಯುವಕನ ಲಗೇಜ್ ಅನ್ನು ತಾಪಾಸಣೆ ನಡೆಸಿದರು. ನಂತರ ಯುವಕ ಧರಿಸಿದ್ದ ಕಪ್ಪು ಜೀನ್ಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಸೊಂಟ ಭಾಗದಲ್ಲಿ ಬಳಿ ಹೊಲಿಯಲಾದ ಚಿನ್ನದ ಪೇಸ್ಟ್ ಇರುವ ಚೀಲಗಳು ಪತ್ತೆಯಾದವು.
ಕಸ್ಟಮ್ಸ್ ಅಧಿಕಾರಿಗಳು ಯುವಕನಿಂದ 907 ಗ್ರಾಂ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಣೆ ಮತ್ತು ಕಸ್ಟಮ್ಸ್ ಸುಂಕ ವಂಚನೆಗಾಗಿ ಆತನನ್ನು ಬಂಧಿಸಿದ್ದಾರೆ.