ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1.25 ಕೋಟಿ ರೂ. ಮೌಲ್ಯದ 2 ಕೆಜಿ ಚಿನ್ನವನ್ನು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಪಡೆದಿದ್ದಾರೆ.
ಪ್ರಯಾಣಿಕ ತನ್ನ ಸೊಂಟದ ಬೆಲ್ಟ್ ನಲ್ಲಿದ್ದ ಪೌಚ್ ಹಾಗೂ ಹ್ಯಾಂಡ್ ಬ್ಯಾಗ್ ನಲ್ಲಿ ರೂ.68.18 ಲಕ್ಷ ಮೌಲ್ಯದ ಚಿನ್ನ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.ಮಸ್ಕತ್ನಿಂದ ಓಮನ್ ಏರ್ ವಿಮಾನದಲ್ಲಿ (ಡಬ್ಲ್ಯುವೈ 281) ಬಂದಿದ್ದ ಪ್ರಯಾಣಿಕರೊಬ್ಬರಿಂದ 1113.07 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಎರಡು ದಿನಗಳ ಹಿಂದೆ ಬ್ಯಾಂಕಾಕ್ ನಿಂದ ಬಂದಿದ್ದ ಮೂವರು ಪುರುಷರು ಹಾಗೂ ಕೊಲಂಬೋದಿಂದ ಬಂದಿದ್ದ ಇಬ್ಬರು ಮಹಿಳೆಯರಿಂದ 966ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.ಬ್ಯಾಂಕಾಕ್ನಿಂದ ಬಂದ ಇಂಡಿಗೋ ವಿಮಾನ 6ಇ 1056 ರಲ್ಲಿ ಮೂವರು ಪ್ರತ್ಯೇಕ ಪ್ರಯಾಣಿಕರಿಂದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಯಾಣಿಕರು ತಮ್ಮ ಕುತ್ತಿಗೆಯಲ್ಲಿ ಎರಡು ಕಚ್ಚಾ ಚಿನ್ನದ ಸರವನ್ನು ಧರಿಸಿದ್ದರು. ಈ ಸರಗಳು 18,13,800 ರೂ ಮೌಲ್ಯವುಳ್ಳದ್ದಾಗಿದ್ದು, ಒಟ್ಟು 300 ಗ್ರಾಂ ತೂಕವಿತ್ತು.ಇನ್ನಿಬ್ಬರು ಮಹಿಳೆಯರು ಒಳ ಉಡುಪು ಸೇರಿದಂತೆ ಇತರೆಡೆ 1,20,920 ರೂ ಮೌಲ್ಯದ ಚಿನ್ನಾಭರಣವನ್ನು ಬಚ್ಚಿದ್ದರು. ಮತ್ತೋರ್ವ ಮಹಿಳೆ ಸಾಕ್ಸ್ ಹಾಗೂ ಪ್ಯಾಂಟ್ ನಲ್ಲಿ 2,78, 116 ರೂ ಮೌಲ್ಯದ ಒಟ್ಟು 46 ಗ್ರಾಂ ಚಿನ್ನವನ್ನು ಬಚ್ಚಿಟ್ಟಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.