This is the title of the web page
This is the title of the web page

ಅಕ್ರಮ ಮದ್ಯ ಸಾಗಾಣೆ: ಮದ್ಯ, ವಾಹನ ವಶ

ಚಾಮರಾಜನಗರ: ಚಾಮರಾಜನಗರ ವಲಯದ ಬಿಸಲವಾಡಿ ಗ್ರಾಮ ವ್ಯಾಪ್ತಿ ರಸ್ತೆಗಾವಲು ನಡೆಸುತ್ತಿದ ವೇಳೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 9 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಸಾಗಾಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಭಾನುವಾರ ರಾತ್ರಿ 9 ಗಂಟೆ ಸಮಯದಲ್ಲಿ ಈರೋಡ್ ಜಿಲ್ಲೆ ಸತ್ತಿ ತಾಲ್ಲೂಕಿನ ಕಾಮಯನಪುರದ ವೆಂಕಟರಾಜು ಎಂಬ ವ್ಯಕ್ತಿಯು ಟಾಟಾ ಏಸ್ ವಾಹನದಲ್ಲಿ 9 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಕಂಡುಬಂತು.ಆರೋಪಿಯನ್ನು ದಸ್ತಗಿರಿ ಮಾಡಿ ಮದ್ಯವನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಘೋರ ಮೊಕದ್ದಮೆಯನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಮದ್ಯ ಮತ್ತು ವಾಹನದ ಒಟ್ಟು ಮೌಲ್ಯ 203512 ರೂ.ಗಳಾಗಿದೆ.

ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಚಾಮರಾಜ ನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗ ದರ್ಶನದಲ್ಲಿ ಚಾಮರಾಜನಗರ ವಲಯದ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಪ್ರಕರಣ ಕಂಡುಬಂದಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.