ಆನೇಕಲ್: ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಆದಾಗಮಾತ್ರ ಮನುಷ್ಯ ನೆಮ್ಮದಿಯ ಜೀವನವನ್ನು ಸಾಗಿಸಲು ಸಾಧ್ಯ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಭಾರತದ ಮುಂಚೂಣಿಯ ಆರೋಗ್ಯಸೇವಾ ಪೂರೈಕೆದಾರರಾದ ನಾರಾಯಣ ಹೆಲ್ತ್ ಹೆಬ್ಬಗೋಡಿಯಲ್ಲಿ ರಿಹ್ಯಾಬಿಲಿಟೇಷನ್ ಸೆಂಟರ್ ನಿರ್ಮಾಣ ಮಾಡಿದ್ದ ಬುದುವಾರ ಉದ್ಘಾಟಿಸಿ ಸಚಿವರು ಉದ್ಘಾಟನೆ ಮಾಡಿ ಮಾತನಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ತಮಿಳುನಾಡು ಹಾಗೂ ಕೇರಳಕ್ಕೆ ಹೋಲಿಸಿದರೆ ರಾಜ್ಯ ಉತ್ತಮ ಸೇವೆಯನ್ನು ನೀಡುತ್ತಿದೆ, ಇಂತಹ ಸಂದರ್ಭದಲ್ಲಿ ಅತ್ಯಾಧುನಿಕ ಸೌಲಭ್ಯವು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ರಿಹ್ಯಾಬಿಲಿಟೇಷನ್ ಸೇವೆಗಳನ್ನು ನಾರಾಯಣ ಹೆಲ್ತ್ ಸಿಟಿ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ರಾಜ್ಯದಲ್ಲಿ ಮುಂಚೂಣಿಯ ರಿಹ್ಯಾಬಿಲಿಟೇಷನ್ ಸೆಂಟರ್ ಸ್ಥಾಪಿಸುವ ಮೂಲಕ ತೀವ್ರ ರೋಗಕ್ಕೆ ಒಳಗಾದವರಿಗೆ ಪರಿಣಿತ ತಜ್ಞರು ಮತ್ತು ನುರಿತ ತಂಡದಿಂದ ದೊರೆಯುವ ಆರೈಕೆಯ ಪ್ರಾಮುಖ್ಯತೆಗೆ ಒತ್ತು ನೀಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಆರೋಗ್ಯ ಸೇವೆಯಲ್ಲಿ ಈಗಾಗಲೇ ದೇಶದಲ್ಲೇ ಉತ್ತಮ ಸೇವೆ ನೀಡುವ ಮೂಲಕ ನಾರಾಯಣ ಹೆಲ್ತ್ ಶೆಟ್ಟಿ ತನ್ನದೇ ಆದ ಸ್ಥಾನಮಾನವನ್ನು ಪಡೆದಿದ್ದು ಮುಖ್ಯಸ್ಥ ದೇವಿಶೆಟ್ಟಿ ಅವರ ಪಾತ್ರ ಆರೋಗ್ಯ ಕ್ಷೇತ್ರಕ್ಕೆ ಮಹತ್ತರವಾದದ್ದು ಎಂದು ಹೇಳಿದ ಅವರು ಇಂತಹ ಚಿಕಿತ್ಸೆಗಳನ್ನು ನೀಡುವ ಕೆಲಸ ರಾಜ್ಯದ ಇತರ ಭಾಗಗಳಲ್ಲೂ ಆಗಬೇಕು ಇದರಿಂದ ನೊಂದವರ ಬಾಳಲ್ಲಿ ಬೆಳಕಾಗಲು ಸಹಾಯ ಆಗಲಿದೆ ಎಂದು ಹೇಳಿದರು.
ನಾರಾಯಣ ಹೆಲ್ತ್ ಸಿಟಿ ಮುಖ್ಯಸ್ಥ ಡಾ. ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ರಿಹ್ಯಾಬಿಲಿಟೇಷನ್ ಸೌಲಭ್ಯವು ಅತ್ಯಂತ ವಿಶಿಷ್ಟವಾಗಿದೆ. ಈ ಕೇಂದ್ರವು ಅತ್ಯಾಧುನಿಕ, ಅಧಿಕ ವೆಚ್ಚ ಉಳಿಸುವ ರಿಹ್ಯಾಬಿಲಿಟೇಷನ್ ಸೆಂಟರ್ ಆಗಿದ್ದು ಒಳರೋಗಿ ಮತ್ತು ಹೊರರೋಗಿಗಳ ಅಗತ್ಯಗಳನ್ನು ಪೂರೈಸುವ ಹಲವಾಗಿ ಅಗತ್ಯ ಮಷೀನರಿಗಳನ್ನು ಇಲ್ಲಿ ಅಳವಡಿಸಲಾಗಿದೆ, ಪೂರಕ ವಾತಾವರಣದಲ್ಲಿ ಮಲ್ಟಿಸ್ಪೆಷಾಲಿಟಿಗೆ ತಕ್ಕಂತೆ ನೋಡಿದ್ದ ತಜ್ಞರು ಇಲ್ಲಿ ರೋಗಿಯ ಆರೈಕೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲು ಉತ್ತಮ ತಂಡವನ್ನು ನಾವು ಈಗಾಗಲೇ ನೀಡಿದ್ದು ನಾರಾಯಣ ಹೆಲ್ತ್ ಸಿಟಿಯಲ್ಲಿ ಪರಿಣಿತರಾಗಿರುವ ತಂಡ ಇಲ್ಲಿ ಸೇವೆ ಸಲ್ಲಿಸಲಿದೆ ಎಂದು ಹೇಳಿದರು.
ಇಂತಹ ಅಪರೂಪದ ಆರೈಕೆ ಬಾರಿ ವಿರಳ ಆಗಿದ್ದು ಸಮಗ್ರವಾದ ಸೇವೆಯನ್ನು ನೀಡುವ ಸಲುವಾಗಿ ನಾವು ಎಲ್ಲಾ ರೀತಿಯಲ್ಲೂ ಸನ್ನದ್ಧರಾಗಿದ್ದೇವೆ ಎಂದು ಹೇಳಿದ ಅವರು ಕಡಿಮೆ ದರದಲ್ಲಿ ಉತ್ತಮ ಸೇವೆಯನ್ನು ಈ ಸೆಂಟರ್ ನೀಡಲಿದೆ ಇದರ ಸದುಪಯೋಗವನ್ನು ಎಲ್ಲರೂ ಕೂಡ ಪಡೆದುಕೊಳ್ಳಬೇಕು ಎಂದರು.
ನಾರಾಯಣ ಹೆಲ್ತ್ ಸಿಇಒ ಡಾ. ಇಮ್ಯಾನ್ಯುಯೆಲ್ ರುಪರ್ಟ್ ಮಾತನಾಡಿ, ಈ ಸೆಂಟರ್ ಆರೋಗ್ಯಸೇವಾ ಪೂರೈಕೆಯಲ್ಲಿ ರಿಹ್ಯಾಬಿಲಿಟೇಷನ್ ಸೇವೆಗಳಲ್ಲಿ ಇರುವ ಸೇವೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸಲಿದೆ ಎಂದರು.ಫಿಸಿಕಲ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟೇಷನ್ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ವೆಂಕಟಕೃಷ್ಣನ್ -ನಮ್ಮ ತಂಡದಲ್ಲಿ ಮಲ್ಟಿಡಿಸಿಪ್ಲಿನರಿ ರಿಹ್ಯಾಬಿಲಿಟೇಷನ್ ಫಿಸಿಷಿಯನ್,ಫಿಸಿಯಾಟ್ರಿಸ್ಟ್ ಗಳು, ಫಿಸಿಕಲ್ ಥೆರಪಿಸ್ಟ್ ಗಳು, ಆಕ್ಯುಪೇಷನಲ್ ಥೆರಪಿಸ್ಟ್, ಮಾತು ಮತ್ತು ಭಾಷೆಯ ಪೆಥಾಲಜಿಸ್ಟ್ ಗಳು, ಆರ್ಥೊಟಿಸ್ಟ್ ಗಳು, ಸೈಕಾಲಜಿಸ್ಟ್ ಇದ್ದು, ಸೇವೆಯ ಗುಣಮಟ್ಟದಲ್ಲಿ ನಾವು ನಮ್ಮ ರೋಗಿಗಳಿಗೆ ಕಾರ್ಯ ಗುಣಮಟ್ಟದ ಫಲಿತಾಂಶ ನೀಡುತ್ತೇವೆ.
ಕಾರ್ಯಕ್ರಮದಲ್ಲಿ ಸಿ.ಇ.ಓ,ತಿಮ್ಮಪ್ಪ ಹೆಗ್ಡೆ,ಬೊಮ್ಮಸಂದ್ರ ಕೈಗಾರಿಕಾ ಸಂಘದ ಅದ್ಯಕ್ಷ ಎ.ಪ್ರಸಾದ್, ನಾಯಾಯಣ ಹೆಲ್ತ್ ಸಿಟಿ ವೈದ್ಯರ ತಂಡದವರಾದ ವಿಕ್ರಮ್ ಹುಡೇದ್,ಕೋಮಲ್ ಪ್ರಸಾದ್,ದಿವಾಕರ್ ಹಾಜರಿದ್ದರು.