ಬೆಂಗಳೂರು: ಬೆಂಗಳೂರಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಮಗು ಸತ್ತಿದ್ದಕ್ಕೆ ತಾಯಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್ನಲ್ಲಿ ನಡೆದಿದೆ.
ಹೌದು ಬಚ್ಚಲು ಮನೆಯ ನೀರಿನ ಬಕೆಟ್ನಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ. ಮಗುವಿನ ಸಾವು ಕಂಡು ತಾಯಿ ಪ್ರತಿಭಾ (29) ಕೂಡ ನೇಣಿಗೆ ಶರಣಾಗಿದ್ದಾರೆ.
ಚಂದ್ರಾ ಲೇಔಟ್ ಠಾಣೆಯ ಭೈರವೇಶ್ವರ ನಗರದಲ್ಲಿ ನಡೆದಿದೆ. 11 ತಿಂಗಳ ಗಂಡು ಮಗು ಅಗಸ್ತ÷್ಯ ಬಕೆಟ್ ನೀರಲ್ಲಿ ಮುಳುಗಿ ಸಾವನ್ನಪ್ಪಿದೆ. ತಾಯಿ ಮಗ ಇಬ್ಬರೆ ಮನೆಯಲ್ಲಿ ಇದ್ದಾಗ ಘಟನೆ ನಡೆದಿದೆ.



