ರಾಯಚೂರು: ಜಿಲ್ಲೆಯಲ್ಲಿ ಯುಗಾದಿ ಕರಿ ಹಿನ್ನೆಲೆ ಬಣ್ಣದಾಟದ ನಂತರ ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ನೀರುಪಾಲಾಗಿರುವ ಪ್ರತ್ಯೇಕ ಘಟನೆಗಳು ನಡೆದಿವೆ.
ಜಿಲ್ಲೆಯ ಅರಕೇರಾ ತಾಲೂಕಿನ ನಾಗೋಲಿ ಗ್ರಾಮದ ಬಳಿ ನಾರಾಯಣಪೂರ ಬಲದಂಡೆ ಕಾಲುವೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಬುದ್ದಿನ್ನಿ ಗ್ರಾಮದ ನಿವಾಸಿ 20 ವರ್ಷದ ಗಂಗಾಧರ ಮೃತ ದುರ್ದೈವಿ. ಹೋಳಿ ಬಳಿಕ ಸ್ನೇಹಿತರೊಂದಿಗೆ ಸ್ನಾನ ಮಾಡಲು ಕಾಲುವೆಗೆ ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದ. ಮಾಹಿತಿ ತಿಳಿದು ಗ್ರಾಮಸ್ಥರು ನಿರಂತರ ಶೋಧ ಕಾರ್ಯ ನಡೆಸಿದ್ದರು. ನಾಗೋಲಿ ಗ್ರಾಮದ ಬಳಿ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಗಬ್ಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ: ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ನೀರುಪಾಲು



