ಬೆಂಗಳೂರು: ಅನಕೊಂಡನಹಳ್ಳಿ ಮತ್ತು ವಿಶ್ವನಾಥಪುರ ಪೊಲೀಸ್ ಠಾಣ ವ್ಯಾಪ್ತಿಗಳಲ್ಲಿ ಪ್ರತ್ಯೇಕ ಎರಡು ಮನೆಗಳ ಬೀಗ ಮುರಿದು ಚಿನ್ನಾಭರಣ, ನಗದು ಹಾಗೂ ನಗದು ಕಳವಾಗಿರುತ್ತದೆ. ಅನುಗುಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಸಂದ್ರದ ಹಳ್ಳಿಯ ಗೋಪಾಲಕೃಷ್ಣ ಎಂಬುವರ ಮನೆ ಬೀಗ ಮುರಿದು ೯ ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುತ್ತಾರೆ.
ಮತ್ತು ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ತೈಲ ಸುದೀಪ್ ತೈಲ ಗಿರಾ ಗ್ರಾಮ
ದಲ್ಲಿ ಮುನಿ ಆಂಜನಪ್ಪರವರ ಮನೆ ಬೀಗ ಮುರಿದು ಮೂರು ಲಕ್ಷ ರೂ. ನಗದು ಹಾಗೂ ೬೦ ಗ್ರಾಂ ಚಿನ್ನಾಭರಣ ಕಳವಾಗಿರುತ್ತದೆ. ವಿಶ್ವನಾಥಪುರ ಮತ್ತು ಅನುಗುಂಡನಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ



