ಕುಣಿಗಲ್: ಐದು ಬೆರಳಿಗಳಿಂದ ಕೈ ಮುಷ್ಠಿಯಾದಂತೆ ಐದು ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಗಟ್ಟಿಯಾಗಿದೆ. ಕಮಲ ಮುದುಡಿಹೋಗಿದೆ. ತೆನೆ ಹೊಲದಲ್ಲಿ ಬಿದ್ದು ಹೋಗಿದೆ ಎಂದು ಲೇವಡಿ ಮಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಕಾರ ಮಾಡಿದವರನ್ನು ರಾಜ್ಯದ ಜನೆತೆಯ ಮರೆಯುವುದಿಲ್ಲ ಅವರ ಮೇಲೆ ನಂಬಿಕೆ ಇದೆ. ಎಂಪಿ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದಾ ವಿವಿಧ ಅಭಿವೃದ್ದಿ ಯೋಜನೆಗಳ ಶುಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ ಹಾಗೂ ಗೃಹಲಕ್ಷ್ಮೀ ಯೋಜನೆಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಗ್ಯಾರಂಟಿ ಮೂಲಕ ಕಾಂಗ್ರೆಸ್ ಪಕ್ಷ ಬಡತನ ವಿರುದ್ದ ಯುದ್ದ ಮಾಡುತ್ತಿದ್ದೇವೆ. ಬಿಜೆಪಿ, ಜೆಡಿಎಸ್ ಪಕ್ಷಗಳ ವಿರುದ್ದ ನಾವು ಯುದ್ದ ಮಾಡುತ್ತಿಲ್ಲ. ಇಂದು ಕುಟುಂಬಕ್ಕೆ ಗ್ಯಾರಂಟಿಗಳಿಂದ 5 ಸಾವಿರಕ್ಕೂ ಹೆಚ್ಚು ಹಣ ಮನೆ ತಲುಪುತ್ತಿದೆ, ಇದರಿಂದ ಬಡವರು ಜೀವನ ಸಾಗಿಸಲು ಸಹಕಾರಿಯಾಗುತ್ತಿದೆ, 3 ಲಕ್ಷ 74 ಸಾವಿರ ಕೋಟಿ ಬಜೆಟ್ ಹಣದಲ್ಲಿ 1 ಲಕ್ಷದ 25 ಸಾವಿರ ಕೋಟಿ ರಾಜ್ಯದ ಅಭಿವೃದ್ದಿಗೆ ಮೀಸಲಿಡಲಾಗಿದೆ ಎಂದು ಹೇಳಿದರು,
ತಡೆಯಲು ಸಾಧ್ಯವಾಗಿಲ್ಲ: ಹೇಮಾವತಿ ನೀರಿನ ಪಾಲು ತಾಲೂಕಿಗೆ ಹರಿಯದೇ 25 ವರ್ಷಗಳಿಂದ ಅನ್ಯಾಯವಾಗಿತ್ತು, ಇದನ್ನು ಮನಗೊಂಡು ಸಮಿಶ್ರ ಸರ್ಕಾರದಲ್ಲಿ ಲಿಂಕ್ ಕೆನಾಲ್ ಯೋಜನೆಗೆ ಅನುಮತಿ ನೀಡಲಾಗಿತ್ತು, ಬದಲಾದ ರಾಜಕೀಯದಿಂದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಯೋಜನೆಯನ್ನು ಬದಲಾಯಿಸಿದರು,
ಆದರೆ ಯೋಜನೆಗೆ ಸಮಯ ಮುಂದಕ್ಕೆ ಹೋಗುರ ಬಹುದು ಅಷ್ಟೇ ಆದರೆ ಈ ಯೋಜನೆಯನ್ನು ನಿಮ್ಮಿಂದ ತಡೆಯಲು ಆಗಲಿಲ್ಲ, ತಾಲೂಕಿನ ಜನತೆಯ ಋಣವನ್ನು ನಾವು ತೀರಿಸಿದ್ದೇವೆ, ಹಿಂದೆ ಮಾಜಿ ಸಚಿವರಾದ ವೈ.ಕೆ.ರಾಮಯ್ಯ, ಎನ್.ಹುಚ್ಚಮಾಸ್ತಿಗೌಡ ಬಿಟ್ಟರೇ ಯಾರಾದರೂ ಸಾಕ್ಷಿ ಗುಡ್ಡ ಬಿಟ್ಟು ಹೋಗಿದ್ದಾರೆ ಎಂದರೇ ಡಿ.ಕೆ.ಸುರೇಶ್, ಶಾಸಕ ಡಾ.ಹೆಚ್.ಡಿ.ರಂಗನಾಥ್ ಆ ಕೆಲಸ ಮಾಡಿದ್ದಾರೆ ಎಂದರು.
700 ಕೋಟಿ ಯೋಜನೆಗೆ ತಯಾರಿ: ಮಾರ್ಕೋನಹಳ್ಳಿ ಜಲಾಶಯದಿಂದ ಪ್ರತಿ ಮನೆ, ಮನೆಗೆ ನಲ್ಲಿ ನೀರು ಕೊಡುವ ಉದ್ದೇಶದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ ವಿವಿಧ ಯೋಜನಡಿಯಲ್ಲಿ 700 ಕೋಟಿ ಯೋಜನೆ ಸಿದ್ದವಾಗಿದೆ, ಅದ ಕೂಡಿ ಸದ್ಯದಲ್ಲೇ ಕಾರ್ಯ ರೂಪಕ್ಕೆ ತಂದು ಇತಿಹಾಸ ಪುಟದಲ್ಲಿ ಸೇರಿವಂತ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದು ಹೇಳಿದರು,
ಗ್ಯಾರಂಟಿಗೆ ಬಿಜೆಪಿ ಟೀಕೆ: ಬಿಜೆಪಿ ಮುಖಂಡರು ಗ್ಯಾರಂಟಿ ಯೋಜನೆಯನ್ನು 420 ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಆದರೆ ಬಿಜೆಪಿ ನಾಯಕರು ಅವರ ಕಾರ್ಯಕರ್ತರಿಗೆ ಹೇಳಲಿ ಗ್ಯಾರಂಟಿ ಯೋಜನೆಗಳನ್ನು ತಗೆದುಕೊಳ್ಳಬೇಡಿ ಎಂದು ಹೇಳಲಿ ಎಂದು ತಿರುಗೇಟು ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಮಾತನಾಡಿ ಸರಕಾರ ಒಂದು ಕೇವಲ ಓಂಭತ್ತು ತಿಂಗಳಲ್ಲಿ ಕುಣಿಗಲ್ ಕ್ಷೇತ್ರದಲ್ಲಿ 36 ಅಭಿವೃದ್ದಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿರುವುದು ಸಮಾನ್ಯದ ವಿಷಯವಲ್ಲ. ಇಡೀ ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ನಡೆಯದೇ ಇರುವ ಅಭಿವೃದ್ದಿ ಕೆಲಸಗಳು ಈ ಕ್ಷೇತ್ರದಲ್ಲಿ ನಡೆಯುತ್ತಿದ್ದೆ.
ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಡಾ.ರಂಗನಾಥ್ ಅವರ ಕಾರ್ಯವೈಕರಿ ಹಾಗೂ ಕ್ಷೇತ್ರದ ಬಗ್ಗೆಯ ಕಾಳಜಿ ಇಲ್ಲಿ ತೋರಿಸುತ್ತದೆ ಎಂದುರು. ಬೆಂಗಳೂರಿನಿಂದ ಕೇವಲ 70 ಕೀ ಮೀ ದೂರದಲ್ಲಿ ಇರುವ ತುಮಕೂರಿನ ಅಭಿವೃದ್ದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಹಕಾರ ನೀಡಬೇಕು ತುಮಕೂರು ನಿಮ್ಮ ಕ್ಷೆತ್ರ ಎಂದೇ ಪರಿಗಣಿಸಿ ಸಹಕಾರ ನೀಡಿದರೆ ತುಮಕೂರು ಅಭಿವೃದ್ದಿ ಹೋಂದಿ ಬೆಂಗಳೂರಿನ ಮೇಲೆನ ಒತ್ತಡ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.
ಸಚಿವರಾದ ಚಲುವನಾರಾಯಣಸ್ವಾಮಿ, ರಹೀಮ್ ಖಾನ್, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಹೆಚ್.ಡಿ.ರಂಗನಾಥ್, ವೆಂಕಟೇಶ್, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ನೀರಾವರಿ ಸಲಹೆಗಾರ ಜಯಪ್ರಕಾಶ್, ಮಾಜಿ ಶಾಸಕ ವೆಂಕಟರಮಣಪ್ಪ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆಶೋಕ್, ಮತ್ತಿತರರು ಇದ್ದರು .