ಮೇಲುಕೋಟೆ : ಮೈಸೂರು ಸಂಸ್ಥಾನ ಸ್ಥಾಪಿಸಲು ವರನೀಡಿದ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ವಿಜಯದಶಮಿಯಂದು ಮಹಾರಾಜಾಲಂಕಾರದಲ್ಲಿ ಕಂಗೊಳಿಸಿದ ದಿವ್ಯಮಂಗಳರೂಪವನ್ನು ನಾಡಿನ ವಿವಿದೆಡೆಯಿಂದ ಬಂದಿದ್ದ ಸಹಸ್ರರಾರು ಭಕ್ತರು ಕಣ್ತುಂಬಿಕೊAಡರು. ನಾಡಿನ ಸಮಸ್ತ ಅನ್ಯಾಯಗಳನ್ನು ನಿರ್ಮೂಲನೆ ಮಾಡಲು ಧರೆಗಿಳಿದ ಚಕ್ರವರ್ತಿಯಂತೆ ಕಂಡ ಸ್ವಾಮಿಯ ಚೆಲುವನ್ನು ಕಣ್ತುಂಬಿಕೊಳ್ಳಲು ಇಡೀದಿನ ಮೇಲುಕೋಟೆಯಲ್ಲಿ ಭಕ್ತಸಾಗರವೇ ಕಿಕ್ಕಿರಿದು ತುಂಬಿ ದೇವರದರ್ಶನ ಪಡೆದರು. ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿಗೂ ಸಹ ಮಹಾರಾಜರ ಸಾಂಪ್ರದಾಯಿಕ ಅಲಂಕಾರವನ್ನು ನೆರವೇರಿಸಲಾಗಿತ್ತು