ಬೊಮ್ಮನಹಳ್ಳಿ: ಹತ್ತಾರು ವರ್ಷಗಳಿಂದ ಗ್ರಾಮಸ್ಥರು ಕಂಡ ಕನಸು ಸಕಾರಗೊಂಡಿದೆ ತಾಯಿ ಸೇವೆಯ ಭಾಗ್ಯವು ನಮಗೆ ದೊರಕಿದೆ ಎಂದು ಓಂ ಶಕ್ತಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಕೆ.ಶಿವರೆಡ್ಡಿ ತಿಳಿಸಿದರು.ಅವರು ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ನಾಗನಾಥಪುರಲ್ಲಿ ಪುರಾತನ ಕಾಲದ ಓ ಶಕ್ತಿ ದೇವಸ್ಥಾನ ನೂತನ ವಿಮಾನ ಗೋಪುರ ಕಳಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇವಿಯ ಮಹಿಮೆ ಅಪಾರ: ಈ ತಾಯಿಯು ಬಹಳ ಶಕ್ತಿ ದೇವಿಯಾಗಿದ್ದು, ನಂಬಿದವರನ್ನು ಕೈ ಬಿಡದಂತೆ ಕಾಯುತ್ತಾಳೆ, ಭಕ್ತಿ ಭಾವದಿಂದ ಆರಾಧಿಸಿದರೆ ಸಕಲ ಸಿದ್ದಿಗಳನ್ನು ನೀಡುತ್ತಾಳೆ. ಈ ದೇವಿಯ ಸೇವೆ ಮಾಡಲು ಸ್ಥಳೀಯ ಮುಖಂಡರು ಹಾಗೂ ಭಕ್ತರನ್ನು ಜೊಡಿಸಿಕೊಂಡು ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಸಂಕಲ್ಪವನ್ನು ಕೈಕೊಂಡೋ ಉತ್ತಮ ರೀತಿಯಲ್ಲಿ ದೇವಿಯ ದಯೆಯಿಂದ ಕಾರ್ಯವು ಫಲನೀಡಿದೆ ಇಂದು ಗ್ರಾಮದ ಭಕ್ತರಲ್ಲಿ ಮನೆ ಮನೆಯ ಹಬ್ಬದ ರೀತಿಯಲ್ಲಿ ಬಂದು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ ಇದಕ್ಕಿಂತಲೂ ಬೇರೆ ಭಾಗ್ಯ ಏನಿದೆ ಎಂದರು.
ಇದೇ ವೇಳೆ ಎರಡು ದಿನಗಳು ಗಂಗಾಪೂಜೆ ಗೋ ಪೂಜೆ, ಯಾಗಶಾಲಾ ಪ್ರವೇಶ ಪುಣ್ಯಹವಾಚನ ಋತ್ವಿಕ್ವರಣೆ ಕಳಶ ಸ್ಥಾಪನೆ ಆದಿತ್ಯಾದಿ ನವಗ್ರಹ ದೇವತಾ ಬಿಂಬ ಶುದ್ಧಿ ವಾಸ್ತು ರಾಕ್ಷಘ್ನಹೋಮ ಅದಿವಾಸಾಂಗ ಹೋಮ ನಿದ್ರಾ ಕಳಶ ಸ್ಥಾಪನೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ.
ಮಹಾಗಣಪತಿ ಪ್ರಾರ್ಥನೆ ನೇತ್ರೋಲನ ಪ್ರಾಣ ಪ್ರತಿಷ್ಠೆ ಕಲಾ ಹೋಮ ಹಾಗೂ ಚಂಡಿಕಾ ಪಾರಾಯಣ ಸಹಿತ ನವ ಚಂಡಿಕಾ ಹೋಮ ಮಹಾ ಪೂರ್ಣಾಹುತಿ, ಕುಂಭಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯವು ಎರಡು ದಿನಗಳು ಸಾಂಗೋಪಾವಾಗಿ ನಡೆವು . ಇದೇ ವೇಳೆ ತಿಮ್ಮಾರೆಡ್ಡಿ ಕುಟುಂಬದವರು, ಪೊಲೀಸ್ ಇನ್ಸ್ಪೆಕ್ಟರ್ ಸತೀಶ್, ಏಳುಮಲೆ, ರಾಘು, ಸಂದೇಶ್, ಉಣಸೇಳು, ಸುನಿಲ್, ವೆಂಕಟೇಶ್, ಕಿರಣ್, ಸತೀಶ್, ಸುಬ್ಬು, ಆನಂದ್, ಸ್ವಾಮಿ, ವೀರಣ್ಣ, ಬೆಸ್ಲಾಂ ಸಿಬ್ಬಂದಿ ವರ್ಗದವರು ಹಾಗೂ ನಾಗನಾಥಪುರ ಗ್ರಾಮಸ್ಥರು ಹಾಜರಿದ್ದರು.