ಬೆಂಗಳೂರು : ನಿನ್ನೆ ತಾನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಮೇಶ್ ರೆಡ್ಡಿ ಹಾಗೂ ಭಯೋತ್ಪಾದಕರು ಮೊಬೈಲ್ ನಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಜೈಲಿನ ಕರ್ಮಕಾಂಡ ಬಯಲಾಗಿದ್ದು, ಜೈಲಿನಲ್ಲಿ ಮದ್ಯ ಸೇವಿಸಿ ಕೈದಿಗಳ ಭರ್ಜರಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಹೌದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಧ್ಯ ಕುಡಿದು ಕೈದಿಗಳು ಭರ್ಜರಿ ಡ್ಯಾನ್ಸ್ ಹಾಕಿದ್ದಾರೆ ಜೈಲಿನಲ್ಲಿ ಡ್ಯಾನ್ಸ್ ಮಾಡುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ನಾನ್ ವೆಜ್ ಎಣ್ಣೆ ಫುಲ್ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋ ಆಗಿದೆ ಡ್ರಮ್ ಮತ್ತು ತಟ್ಟೆಗಳೇ ಕೈದಿಗಳಿಗೆ ಮ್ಯೂಸಿಕ್ ಬ್ಯಾಂಡ್ ಗಳಾಗಿವೆ. ವಿಡಿಯೋ ಯಾರೂ ವೈರಲ್ ಮಾಡಿದರು ಹೇಗೆ ವೈರಲ್ ಆಯ್ತು ಎನ್ನುವುದರ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಇನ್ನು ಜೈಲಿನ ವೈರಲ್ ವಿಡಿಯೋ ಬಗ್ಗೆ ಪೊಲೀಸರು ತನಿಖೆ ನಡೆಸುತಿದ್ದಾರೆ ವೈರಲ್ ಆಗಿರುವ ವಿಡಿಯೋ ಪರಪ್ಪನ ಅಗ್ರಹಾರ ಜೈಲಿನದ್ದ ಅಥವಾ ಯಾವ ಜೈಲಿನದ್ದು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೈರಲ್ ವಿಡಿಯೋ ತನಿಖೆಯ ವೇಳೆ ಸತ್ಯಾಂಶ ಬಯಲಾಗಿದ್ದು ೨೦೨೩ ವಿಡಿಯೋ ಅಲ್ಲ ಎಲ್ಲವೂ ಕೂಡ ೨೦೨೫ರ ವಿಡಿಯೋ ಎಂದು ತಿಳಿದು ಬಂದಿದೆ ಕಳೆದ ಮಾರ್ಚ್ ನಲ್ಲಿ ತೆಲುಗು ನಟ ತರುಣ್ ಅರೆಸ್ಟ್ ಆಗಿದ್ದ ರಮ್ಯಾ ರಾವ್ ಗೋಲ್ಡ್ ಸ್ಮಲಿಂಗ್ ಪ್ರಕರಣದಲ್ಲಿ ತರುಣ್ ರೆಸ್ಟ್ ಆಗಿದ್ದ ಕೈಯಲ್ಲಿ ತರುಣ್ ಮೊಬೈಲ್ ಹಿಡಿದಿರುವ ವಿಡಿಯೋ ಸಹ ಬರೆಯಲಾಗಿದೆ ಮೊಬೈಲ್ ಹಿಡಿದು ತರುಣ್ ಟಿವಿ ನೋಡುತ್ತಿರುವ ವಿಡಿಯೋ ಆಗಿದೆ ಆದರೆ ಜೈಲಾಧಿಕಾರಿಗಳು ೨೦೨೩ರ ವಿಡಿಯೋ ಅಂತ ಹೇಳಿಕೆ ನೀಡುತ್ತಿದ್ದಾರೆ ಆರೋಪದಿಂದ ಜೈಲಾಧಿಕಾರಿಗಳು ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ.



