ಕೆ.ಆರ್.ಪುರ: ಹೆಣ್ಣುಮಕ್ಕಳು ದೇವರ ಸಮಾನ ಎನ್ನುತ್ತೇವೆ ಆದರೆ ಅವರ ಮೇಲೆಯೇ ಕ್ರೌರ್ಯ ಮೆರೆಯುತ್ತಿದ್ದೇವೆ ಎಂದು ಯುವ ವಿದ್ವಾಂಸ, ರಾಷ್ಟ್ರೀಯ ವ್ಯಾಸ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ.ಕುಪ್ಪನಹಳ್ಳಿ ಎಂ.ಬೈರಪ್ಪ ಕಳವಳ ವ್ಯಕ್ತಪಡಿಸಿದರು.ಕೆ.ಆರ್.ಪುರದಲ್ಲಿ ಕೇಂಬ್ರಿಡ್ಜ್ ಕಾಲೇಜು ಆಶ್ರಯದಲ್ಲಿ ಲೇಖಕಿ ಸೌಜನ್ಯ ಎಸ್.ಕೆ. ಅವರ ಚೊಚ್ಚಲ ಕವನ ಸಂಕಲನ ಭಾವದ ಅಲೆಗಳು ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಯಾವುದೇ ಕೆಲಸವಿರಲಿ ಗಂಡುಮಕ್ಕಳ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಆದರೆ ಅವರ ಮೇಲೆ ಕ್ರೌರ್ಯ ಮೆರೆದು ಅವರ ಅವನತಿಗೆ ಕಾರಣವಾಗುತ್ತಿದ್ದೇವೆ ಎಂದರು.ಸಾಹಿತ್ಯ ಎನ್ನುವುದು ಎನ್ನುವುದು ಸವಾಲಿನ ಕೆಲಸ ಹೆಣ್ಣುಮಕ್ಕಳು ಕೂಡ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡು ಸೃಜನಶೀಲ ಬರವಣಿಗೆಯಲ್ಲಿ ಮುಂದುವರೆಯುತ್ತಿದ್ದಾರೆ. ಸೌಜನ್ಯ ಅವರ ಕವನ ಸಂಕಲನ ಭಾವದ ಅಲೆಗಳು ಪರಿಸರ, ಸಹನೆ, ಅತ್ಯಾಚಾರದಂತಹ ಕ್ರೌರ್ಯ ಮುಂತಾದ ವಿಚಾರಗಳನ್ನು ಒಳಗೊಂಡಿದೆ ಎಂದರು.
ಭಾವದ ಅಲೆಗಳು ಪುಸ್ತಕದ ಲೇಖಕಿ ಸೌಜನ್ಯ ಎಸ್.ಕೆ. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಡೀ ವಿಶ್ವದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ಹೆಚ್ಚಾಗಿವೆ. ಪ್ರತಿಸಾರಿ ಅತ್ಯಾಚಾರ ಆದಾಗ ಮೇಣದ ಬತ್ತಿ ಹಚ್ಚಿ ಸಂತಾಪಸೂಚಿಸುವ ಮೂಲಕ ಸುಮ್ಮನೆ ಆಗುತ್ತೇವೆ. ನಾವುಮೇಣದ ಬತ್ತಿ ಹಚ್ಚುವ ಬದಲು ಕ್ರೌರ್ಯ ಎಸಗಿದವರನ್ನು ಸುಡುವ ಕೆಲಸ ಮಾಡುವುದಿಲ್ಲ.
ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಕ್ರೌರ್ಯ ನಿಲ್ಲಬೇಕು ಎನ್ನುವುದನ್ನೆ ಭಾವದ ಅಲೆಗಳು ಪುಸ್ತಕದಲ್ಲಿ ನನಗೆ ಎನಿಸಿದನ್ನು ಬರೆದಿದ್ದೇನೆ. ನನ್ನ ಭಾವನೆಗಳು ಪುಸ್ತಕ ರೂಪದಲ್ಲಿದೆ. ಹೆಣ್ಣುಮಕ್ಕಳ ವಿಷಯವೆ ಪುಸ್ತಕ ಬರೆಯಲು ಪ್ರೇರಣೆಯಾಗಿದೆ ಎಂದರು.ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಶಿವಾನಂದ, ಕೇಂಬ್ರಿಡ್ಜ್ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಅಶ್ವಿನಿ, ಡಾ.ರೇಖಾ, ಡಾ.ಬಿ.ವಿ.ಕೋಮಲ ಇದ್ದರು.