ಬೆಂಗಳೂರು : ಲೋಕಾಯುಕ್ತ ಹೆಸರಲ್ಲಿ ಹಣ ವಸೂಲಿ ಆರೋಪ ಪ್ರಕರಣಕ್ಕೆ ಸಂಬAಧಪಟ್ಟAತೆ ಎಸ್ ಪಿ ಶ್ರೀನಾಥ್ ಜೋಶಿಗೆ ಮತ್ತೊಂದು ಶಾಕ್ ಎದುರಾಗಿದ್ದು, ತನಿಖೆಯ ವೇಳೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಆಗಿರುವುದು ದೃಢಪಟ್ಟಿದೆ. ಲೋಕಾಯುಕ್ತ ಅಧಿಕಾರಿಗಳು ಈ ಕುರಿತು ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಇಲಾಖೆಯ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿ ಎಸ್ಪಿ ಶ್ರೀನಾಥ್ ಜೋಶಿ ಹಣವನ್ನು ವಸೂಲಿ ಮಾಡುತ್ತಿದ್ದರು. ಬಳಿಕ ಹಣವಸೂಲಿ ಮಾಡಿದ್ದು ಅಲ್ಲದೆ ಪಡೆದ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಮಾಡಿದ್ದಾರೆ. ತನಿಖೆ ಮಾಹಿತಿ ಪತ್ರದಲ್ಲಿ ಲೋಕಾಯುಕ್ತ ಂಆಉP ಉಲ್ಲೇಖಿಸಿದ್ದಾರೆ.