ಹುಬ್ಬಳ್ಳಿ: `ನಿನ್ನೆ ರಾಜ್ಯದಲ್ಲಿ ನಡೆದ 14 ಲೋಕಸಭಾ ಕ್ಷೇತ್ರಗಳ ಮತದಾನದಲ್ಲಿ 14ಕ್ಕೆ 14 ಕ್ಷೇತ್ರಗಳು ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಕೇಂದ್ರ ಸಚಿವ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹುಬ್ಬಳ್ಳಿಯಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಮಾಡುತ್ತಾರೆಅವರ ವ್ಯಕ್ತಿತ್ವದಿಂದ ಉತ್ತರ ಕರ್ನಾಟಕದಲ್ಲಿ ಉತ್ಸಾಹ, ಪ್ರೇರಣೆ ಸಿಗಲಿದೆ ಎಂದು ತಿಳಿಸಿದರು.
ನಿನ್ನೆ ನಡೆದ ಮತದಾನದಲ್ಲಿ 14ಕ್ಕೆ 14 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲುತ್ತದೆ ಇನ್ನುಳಿದ 14ರಲ್ಲಿಯೂ ಗೆಲ್ಲುತ್ತೇವೆ ಎಂದರು.ಕಾಂಗ್ರೆಸ್ ಪಾರ್ಟಿ ಸುಳ್ಳು ಹೇಳುತ್ತಿದೆ. ನಾಲ್ಕು ಪರ್ಸೆಂಟ್ ಮುಸ್ಲೀಮರನ್ನ ಒಬಿಸಿಗೆ ಸೇರಿಸಲು ಹೊರಟಿದ್ದಾರೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯ ಜಾತಿ ಅಲ್ಲ ಧರ್ಮವೂ ಅಲ್ಲ ಎಂದು ಬರೆದಿದ್ದಾರೆ, ಹಾಗಿದ್ದರೆ ಏನು? ಎಂದು ಪ್ರಶ್ನೆ ಮಾಡಿದರು.
ಧರ್ಮಾಧಾರಿತ ಮೀಸಲಾತಿ ಕೊಡಲು ಬರಲ್ಲ ಹೀಗಾಗಿ ಧರ್ಮ ಅಲ್ಲ ಅಂತ ಹೇಳಿದ್ದಾರೆ. ಅತ್ಯಂತ ಹಿಂದುಳಿದ ಜಾತಿಗಳಿಗೆ ಚಿಪ್ಪು ಕೊಡಲು ಹೊರಟಿದ್ದಾರೆ,
ಚೊಂಬು ಕೊಡುತ್ತಿದ್ದಾರೆ ಎಂದರೂ ಪರವಾಗಿಲ್ಲ ಕಾಂಗ್ರೆಸ್ ಪಾರ್ಟಿ ಹಿಂದುಳಿದ ವರ್ಗಗಳಿಗೆ ಪರಮ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಈ ಕುರಿತು ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಯಾಗಿದೆ.
ಮಲ್ಲಿಕಾರ್ಜುನ್ ಖರ್ಗೆ ಅವರು ತಾವು ಮಾಡಿದ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳಬೇಕು. ಅದನ್ನ ಬಿಟ್ಟು ನನ್ನ ಮಣ್ಣಿಗೆ ಬರ್ರಿ ಅಂತ ಜನರನ್ನ ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಕಳೆದ 50 ವರ್ಷಗಳಲ್ಲಿ ಬಹುತೇಕ ಸಮಯ ಅಧಿಕಾರದಲ್ಲಿದ್ದಾರೆ, ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿ ಆಗಿಲ್ಲ ಎಂದು ಹೇಳಿದ ಅವರು ಕಾಂಗ್ರೆಸ್ ಪಾರ್ಟಿ, ಖರ್ಗೆ ಅವರು ಆ ಭಾಗವನ್ನು ಅಭಿವೃದ್ಧಿ ಮಾಡಿಲ್ಲ. ಹಾಗಾಗಿ ಭಾವನಾತ್ಮಕ ದಾಳ ಬಳಸುತ್ತಿದ್ದಾರೆ, ಜನರು ಇದಕ್ಕೆ ಮರುಳಾಗಲ್ಲ ಎಂದರು.
ರಾಹುಲ್ ಗಾಂಧಿ ಹೇಳಿಕೆಗೆ ಬಹಳ ಮಹತ್ವ ಕೊಡಬೇಕಿಲ್ಲ. ಬೇರೆಡೆ ಹೋದಾಗ ಶಾಮ್ ಪಿತ್ರೋಡ ಬರೆದು ಕೊಟ್ಟದ್ದನ್ನು ಓದುತ್ತಾರೆಕರ್ನಾಟಕಕ್ಕೆ ಬಂದಾಗ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಬರೆದುಕೊಟ್ಟದ್ದನ್ನು ಓದುತ್ತಾರೆ ಎಂದರು.ಮೋದಿ ಅವರ ಅವಧಿಯಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಹಣ ಸಂದಾಯವಾಗಿದೆ. ಸುಳ್ಳು ಹೇಳಿ ಜನರನ್ನ ಕನ್ನಡಿಗ- ಕನ್ನಡಿಗ ತಾರತಮ್ಯ ಅಂತಾ ಮಾಡಲು ಹೊರಟಿದ್ದಾರೆ
ಮೊದಲು ಕಾಂಗ್ರೆಸ್ ಪಾರ್ಟಿ, ದೇಶದಲ್ಲಿರುವ ಹಿಂದುಗಳಿಗೆ ಏನು ಮಾಡಲು ಹೊರಟಿದೆ ಅಂತ ಹೇಳಲಿ. ನರೇಂದ್ರ ಮೋದಿಯವರು ಎಂದಿಗೂ ಕನ್ನಡಿಗರ ಪರವಾಗಿ ಇದ್ದಾರೆ. ಬರ ಅನುದಾನ ವಿಚಾರದಲ್ಲಿ ರಾಜಕೀಯ ಕಾರಣಕ್ಕೆ ಕೋರ್ಟಿಗೆ ಹೋಗಿದ್ದಾರೆ. ಇಂಡಿ ಅಲೈನ್ಸ್ನವರು ಕೋರ್ಟಿಗೆ ಹೋಗಿ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.