This is the title of the web page
This is the title of the web page

ಕಂಠೀರವ ಕಾಲೋನಿಯ ಶ್ರೀ ಮುನೇಶ್ವರಸ್ವಾಮಿ ದೇವಾಲಯ ಮತ್ತು ಸಮುದಾಯ ಭವನ ಉದ್ಘಾಟನಾ ಸಮಾರಂಭ

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ. ರಾಜ್‍ಕುಮಾರ್ ವಾರ್ಡ್ ನ ಕಂಠೀರವ ಕಾಲೋನಿಯಲ್ಲಿ ವಸತಿ ಸಚಿವ ವಿ. ಸೋಮಣ್ಣರವರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಂಡಿರುವ ಶ್ರೀ ಮುನೇಶ್ವರಸ್ವಾಮಿ ದೇವಾಲಯ ಮತ್ತು ಸಮುದಾಯ ಭವನ ಉದ್ಘಾಟನಾ ಸಮಾರಂಭ ನಡೆಯಲಿದೆ.

ಅಗ್ರಹಾರ ದಾಸರಹಳ್ಳಿಯ ಕಂಠೀರವ ಕಾಲೋನಿ ಗ್ರಾಮ ದೇವರಾದ ಶ್ರೀ ಮುನೇಶ್ವರ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 01-02-2023ನೇ ಬುಧವಾರದಿಂದ 03-02-2023 ಶುಕ್ರವಾರದವರೆಗೆ ಮಾನ್ಯ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಗೋವಿಂದರಾಜನಗರ ವಿಧಾನಸಭಾಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವಿ. ಸೋಮಣ್ಣ ರವರ ಅಧ್ಯಕ್ಷತೆಯಲ್ಲಿ ಅತ್ಯಂತ ವೈಭವದಿಂದ ನಡೆಯಲಿದೆ.

ಕೋಡಿಹಳ್ಳಿ ಬೃಹನ್ಮಠದ ಶ್ರೀ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿಯವರು ಹಾಗೂ ಪಾಲನಹಳ್ಳಿ ಮಠದ ಡಾ. ಶ್ರೀ ಶ್ರೀ ಸಿದ್ದರಾಜು ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿಇಂದು ದಿನಾಂಕ 02-02-2023 ಗುರುವಾರ ಸಂಜೆ ಶ್ರೀ ಮುನೇಶ್ವರ ಸ್ವಾಮಿ ದೇವಾಲಯದ ರಾಜಗೋಪುರದ ಕಳಸ ಪ್ರತಿಷ್ಠಾಪನೆ ನಂತರ ಪ್ರಸಾದ ವಿನಿಯೋಗನಾಳೆ ದಿನಾಂಕ 03-02-2023 ಶುಕ್ರವಾರ, ಬೆಳಗ್ಗೆ 4-30 ರಿಂದ 5-30 ರವರೆಗೆ ಶ್ರೀ ಮುನೇಶ್ವರಸ್ವಾಮಿಯ ಪ್ರತಿಷ್ಠಾಪನೆ ವಿವಿಧ ಪೂಜೆ ಹೋಮಗಳು ಜರುಗಲಿವೆ ನಂತರ ಮಹಾಮಂಗಳಾರತಿ ಮಧ್ಯಾಹ್ನ 12-40ರಿಂದ ಕುಂಬಾಭಿಷೇಕ ನಂತರ ಮಹಾಮಂಗಳಾರತಿ, ಮಧ್ಯಾಹ್ನ 1-00 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ.

ಸಂಜೆ 6ಗಂಟೆಗೆ ನಾಡಿನ ಹೆಸರಾಂತ ಗಾಯಕ ಶ್ರೀ ಸಂತವಾಣಿ ಸುಧಾಕರ್ ಮತ್ತು ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದು ಭಕ್ತಾದಿಗಳು ಎಲ್ಲಾ ಕಾರ್ಯಕ್ರಮಗಳಿಗೆ ಸಕಾಲಕ್ಕೆ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.