ಯಲಹಂಕ: ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಸಮಾಜವೂ ಕಾರಣವಾಗುತ್ತದೆ. ಅವನು ಬೆಳೆಯುವ ಪರಿಸರ ಜನ ಸಂಪರ್ಕ ಚಟುವಟಿಕೆಗಳು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಜನಪರ ಜನಸ್ನೇಹಿ ಸಮಾಜ ನಿರ್ಮಾಣದ ಧ್ಯೇಯವಿರುವ ಹಾಗೂ ಯುವ ಪ್ರತಿಭೆ ಎ.ನಿಶ್ಚಯ್ ಕುಮಾರ್ ಹಾಗೂ ಸಮಾನ ಮನಸ್ಕರು ಒಡಗೂಡಿ ಅಭಿಮಾನ ಫೌಂಡೇಷನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಬೇಕೆಂಬ ಬಹು ದಿನಗಳ ಕನಸು.
ದಿನಾಂಕ 26.05.24 ರಂದು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜನೆಯಾಗಿತ್ತು. ಶ್ರೀಮತಿ ವಿದ್ಯಾ.ಕೆ ರವರು ಪ್ರಾರ್ಥನೆ ಗೀತೆ ಹಾಡಿದರು ಹಾಗೂ ಶ್ರೀಮತಿ.ಶೋಭ .ಎಂ.ಆರ್ ರವರು ಎಲ್ಲರನ್ನು ಸ್ವಾಗತಿಸಿದರು. ಸಂಸ್ಥೆಯ ಆಯೋಜಕರಾದ ಎ.ನಿಶ್ಚಯ್ ಕುಮಾರ್ ಪ್ರಾಸ್ತಾವನಾ ನುಡಿಗಳನ್ನಾಡಿ ನಿಮ್ಮೆಲ್ಲರ ಅಭಿಮಾನ ಆಶೀರ್ವಾದ ಸದಾ ಇರಲೆಂದು ತಿಳಿಸಿದರು.
ಈ ಸಂಸ್ಥೆಯ ಉದ್ಘಾಟನೆಯನ್ನು ಕಲ್ಲೂರಿನ ಶ್ರೀ ಗುರು ರುದ್ರಮುನಿ ಸ್ವಾಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ತಕ್ಷರಾದ ಶ್ರೀ.ಡಿ.ವೆಂಕಟರಮಣ ಯ್ಯನವರು ಸಸಿಗೆ ನೀರೆರುಯುವ ಮೂಲಕ ಚಾಲನೆ ನೀಡಿದರು ಹಾಗೂ ಈ ಸಸಿ ಬೃಹದಾಕಾರವಾಗಿ ಬೆಳೆದು ಸಮೃದ್ಧಿ ಕಾಣಲೆಂದು ಆಶಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಮಡ್ಡಿಕೆರೆ ಗೋಪಾಲ್, ಸಿರಿಗನ್ನಡ ವೇದಿಕೆಯ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಶ್ರೀ.ಉಮೇಶ್.ಸಿ.ಎನ್, ಜಾಗೃತಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ.ನಾಗೇಶ್.ಬಿ, ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ.ಎ.ಸಿ.ಮಂಜುನಾಥ್ ಹಾಗೂ ಜನ ಸಿರಿ ಫೌಂಡೇಷನ್ ನ ಶ್ರೀ.ನಾಗಲೇಖ ರವರುಗಳು ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಉಮಾಶಂಕರ್ .ಎಂ.ಪಿ ರವರು ವಹಿಸಿದ್ದರು.ಈ ಸಂಸ್ಥೆಯು ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿ ಕವಯತ್ರಿಯರನ್ನು ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಲಯನ್ ಡಾ.ಭ್ರಮರಾ ಶಿವಶಂಕರ್ ಅಧ್ಯಕ್ಷತೆಯಲ್ಲಿ ಶ್ರೀಮತಿ ಲಲಿತಾ ಆಚಾರ್, ಭಾರತಿ ಉಮೇಶ್, ರಾಧಾಮಣಿ.ಎಂ, ವಿಜಯಲಕ್ಷ್ಮಿ ದೊಡ್ಡಮನಿ, ಸಾವಿತ್ರಮ್ಮ ಓಂಕಾರ್ ಪದ್ಮಾಮೂರ್ತಿ ,ಸುಜಾತ ರವೀಶ್ ರವರುಗಳು ಉಪಸ್ಥಿತರಿದ್ದು ವಂದನಾರ್ಪಣೆಯನ್ನು ಶ್ರೀಮತಿ ದಿವ್ಯ ಚೇತನ್ ಮಾಡಿದರು.
ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ನಡೆದ ಈ ಕಾರ್ಯಕ್ರಮ ಫ್ಯಾಷನ್ ಶೋ ದಿಂದ ಮತ್ತಷ್ಟು ಮೆರುಗು ತಂದಿತ್ತು.ಜನಪದ ಗೀತಗಾಯನ,ಚಿತ್ರಕಲಾ ಪ್ರದರ್ಶನ ಕೂಡ ಆಯೋಜನೆಯಾಗಿತ್ತು ಈ ಸಂಸ್ಥೆ ಗೆ ಶುಭವಾಗಲಿ, ಎಲ್ಲರಿಗೂ ಇದು ಮಾದರಿಯಾಗಲಿ ಎಂದು ಶುಭ ಹಾರೈಸೋಣ.