ದೇವನಹಳ್ಳಿ: ಬಿಜೆಪಿ ಪಕ್ಷ ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಸಹ ನಮ್ಮ ಕೈತಪ್ಪ ಬಾರದು, ನಿಜವಾದ ದೇಶಪ್ರೇಮ ಹೊಂದಿರುವವರಿಗೆ ಮತದಾರರ ಬೆಂಬಲವಿರಲಿ ,ನಮ್ಮ ಶಕ್ತಿ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳುವವರಿಂದ ದೇಶದ ಅಭಿವೃದ್ಧಿ ಬಯಸುವುದು ವಿಪರ್ಯಾಸದ ಸಂಗತಿ ಎಂದು ಮಾಜಿ ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.
ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಪಿಳ್ಳಪ್ಪ ಕಾಂಪ್ಲೆಕ್ಸ್ ನಲ್ಲಿ “ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿಯ ನೂತನ ಅಧಿಕೃತ ಕಚೇರಿ”ಯನ್ನು ಉದ್ಘಾಟಿಸಿ ಮಾತನಾಡಿದರು.ನಾನು 30 ವರ್ಷ ರಾಜಕೀಯ ಮಾಡಿದ್ದೇನೆ ಬಿಜೆಪಿ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ ಇದಕ್ಕಿಂತ ಹೆಚ್ಚು ಕೇಳುವ ಅಪೇಕ್ಷೆ ಇಲ್ಲ ನನಗೆ ಯಾರೂ ಸಹ ವಿರೋಧಿಗಳಿಲ್ಲ ಕಾಂಗ್ರೆಸ್ ಅವರು ಸಹ ನಾನೇ ಎಂದು ಹೇಳುವವರಿದ್ದಾರೆ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಸದಾ ಸಿದ್ದ ಎಂದು ಹೇಳಿದರು.
ಮಾಜಿ ಸಚಿವ ಡಾ. ಕೆ .ಸುಧಾಕರ್ ಮಾತನಾಡಿ 543 ಕ್ಷೇತ್ರಗಳಲ್ಲು ಕಮಲದ ಚಿಹ್ನೆ ಅಡಿಯಲ್ಲಿ ಮತ ಕೇಳಲಿದ್ದೇವೆ,ಅಭ್ಯರ್ಥಿಗಳು ಯಾರು ಅಂತ ಪಾರ್ಲಿಮೆಂಟ್ ಬೋರ್ಡ್ ಅವರು ತೀರ್ಮಾನ ಮಾಡುತ್ತಾರೆ,ಯಾರಿಗೆ ಟಿಕೇಟ್ ನೀಡಿದ್ರು ನಾವು ಕೆಲಸ ಮಾಡಿ ಗೆಲ್ಲಿಸಿಲು ಒಮ್ಮತದಿಂದ ಶ್ರಮಿಸುತ್ತೇವೆ, ಕರ್ನಾಟಕ ರಾಜ್ಯದ ಒಂದು ಚರಿತ್ರೆಯಲ್ಲಿ ಕರಾಳ ದಿನವಾಗಿ ಇದು ಇರುತ್ತೆ ಶಕ್ತಿ ಸೌಧ ವಿಧಾನಸೌಧದಲ್ಲಿ ಪಾಕಿಸ್ತಾನದ ಘೋಷಣೆಯನ್ನ ಕೂಗಿದ್ದಾರೆ.ಅವರ ಅನುಯಾಯಿಗಳು ಹೇಳಿದ್ರೆ ನೈತಿಕತೆ ಅವರು ಹೊರಬೇಕಾಗುತ್ತೆ, ಪಕ್ಷದವರಿಗೆ ಸ್ವಾಭಿಮಾನ ದೇಶದ ಮೇಲೆ ಗೌರವವಿದ್ರೆ ದೇಶದ ಕ್ಷಮೆಯನ್ನ ಬೇಷರತ್ ಆಗಿ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಆರ್.ವಿಶ್ವನಾಥ್ ಮಾತನಾಡಿ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಒಮ್ಮತದಿಂದ ಯುವಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅಲೋಕ್ ರವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ, ಆದರೂ ಕೊನೆ ಕ್ಷಣದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ನಮೋ ವಿಜಯ ಸಂಕಲ್ಪ ಯಾತ್ರೆಯ ಉದ್ದೇಶ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು ಆ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಲಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್, ಕಟ್ಟಾಸುಬ್ರಮಣ್ಯ, ಧೀರಜ್ಮುನಿರಾಜು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ಅಲೋಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣ, ಮಾಜಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಚಿಂತಾಮಣಿ ಬಿಜೆಪಿ ಮುಖಂಡ ವೇಣುಗೋಪಾಲ್, ಪ್ರಧಾನಕಾರ್ಯದರ್ಶಿ ರವಿಕುಮಾರ್, ಮಾಜಿ ಶಾಸಕರಾದ ಜಿ.ಚಂದ್ರಣ್ಣ, ಪಿಳ್ಳಮುನಿಶಾಮಪ್ಪ, ರೈತಮೋರ್ಚಾ ತಾಲೂಕು ಅಧ್ಯಕ್ಷ ವಿನಯ್, ಡಿ.ಸಿ.ನಾರಾಯಣಸ್ವಾಮಿ, ಗೋಪಿನಾಥ್, ಓಬದೇನಹಳ್ಳಿ ಮುನಿಯಪ್ಪ, ಬೀರಸಂದ್ರ ಸಿದ್ದಲಿಂಗಮೂರ್ತಿ, 8 ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಮಹಿಳಾ ಪದಾಧಿಕಾರಿಗಳು ಹಾಜರಿದ್ದರು.