ತಿ.ನರಸೀಪುರ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ನೂತನ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದ ಮಾಜಿ ಶಾಸಕ ಕೆಡಿಪಿ ಸದಸ್ಯ ಯತಿಂದ್ರ ಸಿದ್ದರಾಮಯ್ಯ. ವರುಣ ಕ್ಷೇತ್ರದ ವ್ಯಾಪ್ತಿಯ ಪುರಸಭೆಯ ವಾರ್ಡ್ ಗಳ ಸಮಸ್ಯೆ ಆಲಿಸಲು ಪುರಸಭೆ ಇಲಾಖೆ ವತಿಯಿಂದ ಜನಸಂಪರ್ಕ ಸಭೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಜನಸಂಪರ್ಕ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಲು ಜನರ ನೂಕು ನುಗ್ಗಲು, ಎರಡು ಗಂಟೆ ತಡವಾಗಿ ಆಗಮಿಸಿದ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಜನಸಂಪರ್ಕ ಕಾರ್ಯಕ್ರಮಕ್ಕೆ ದಸಂಸ ಕಾರ್ಯಕರ್ತರ ಪ್ರತಿಭಟನೆಯ ಬಿಸಿ, ಅರ್ಜಿದಾರರಿಗೆ ಅರ್ಜಿ ಸಲ್ಲಿಸಲು ಕಾರ್ಯಕರ್ತರ ಅಡಚಣೆ ಹೀಗೆ ನಾನಾ ಗೊಂದಲಗಳಿಂದ ಪಟ್ಟಣದಲ್ಲಿ ನೆಡದ ಜನ ಸಂಪರ್ಕ ಸಭೆ.
ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಏರ್ಪಡಿಸಲಾಗಿದ್ದ ಜನಸಂಪರ್ಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ವರುಣ ಕ್ಷೇತ್ರದ ಕೆಡಿಪಿ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು.ಪುರಸಭೆ ಕಚೇರಿ ಮುಂಭಾಗ ಶುಕ್ರವಾರ ಹಮ್ಮಿ ಕೊಳ್ಳಲಾಗಿದ್ದ ತಿ.ನರಸೀಪುರ ಪುರಸಭಾ ವ್ಯಾಪ್ತಿ ಯಲ್ಲಿರುವ ವರುಣ ವ್ಯಾಪ್ತಿಯ ವಾರ್ಡ್ಗಳ ಜನಸಂಪರ್ಕ ಸಭೆಯಲ್ಲಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ವಿವಿಧ ಸಮಸ್ಯೆಗಳ ಕುರಿತಂತೆ ಅರ್ಜಿಗಳು ಸಲ್ಲಿಕೆಯಾದವು.
ಅರ್ಜಿ ಸಲ್ಲಿಸುವ ವೇಳೆ ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದು ಹಾಗೂ ಕಾರ್ಯಕರ್ತರು ಯತೀಂದ್ರ ಬಳಿಯೇ ಸುತ್ತುವರೆದಿದ್ದ ಕಾರಣ ನೂಕು ನುಗ್ಗಲು ಉಂಟಾಯಿತು. ಜನಸಂಪರ್ಕ ಸಭೆ ಆಯೋಜಿಸಿದ್ದ ಆಯೋಜಕರು. ಯಾವುದೇ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸುವ ವೇಳೆ ಜನರು ಪರದಾಡುವಂತಾಯಿತು.
ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದ್ದ ಜನ ಸ್ಪಂದನಾ ಕಾರ್ಯಕ್ರಮಕ್ಕೆ ಯತೀಂದ್ರ ಸಿದ್ದರಾಮ ಯ್ಯರವರು ತಡವಾಗಿ ಆಗಮಿಸಿದ್ದ ರಿಂದ ಮಧ್ಯಾಹ್ನ 1 ಗಂಟೆಯ ವೇಳೆಗೆ ಆರಂಭಗೊಂಡಿತು.ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳ ಕುರಿತಂತೆ ಸಾರ್ವಜನಿಕರು ಅರ್ಜಿ ಸಲ್ಲಿಸುತ್ತಿದ್ದವೇಳೆ ವೇದಿಕೆಯ ಬಳಿಯೇ ದಸಂಸ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕಸಿವಿಸಿ ಉಂಟುಮಾಡಿದರು.
ಪಟ್ಟಣದ ಕೆಎಸ್ಐಸಿ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ನವೀನ್ ಎಂಬ ಕಾರ್ಮಿಕರನ್ನು ವಿನಾ ಕಾರಣ ಕೆಲಸದಿಂದ ವಜಾಗೊಳಿಸಲಾಗಿದೆ ತಮಗೆ ಎಷ್ಟೇ ಮನವಿ ಸಲ್ಲಿಸಿದರು ತಾವು ನ್ಯಾಯ ಕೂಡಿಸುತ್ತಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದರು.
ಕೆಎಸ್ ಐಸಿಯಲ್ಲಿ ಉದ್ಯೋಗ ದೊರಕಿಸಿಕೊಡಿ, ವೃದ್ದಾಪ್ಯ ವೇತನ, ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲ, ಬೀದಿ ದೀಪದ ದುರಸ್ತಿ ಮಾಡಿಸಿ, ವಿವಿಧ ಇಲಾಖೆಗಳಲ್ಲಿ ದೊರೆಯುವ ಸಾಲ ಸೌಲಭ್ಯಕ್ಕೆ ಶಿಫಾರಸು ಮಾಡಿ ಎಂಬಿತ್ಯಾದಿ ಬೇಡಿಕೆಗಳು ಜನ ಸಂಪರ್ಕ ಸಭೆಯಲ್ಲಿ ಅರ್ಜಿ ಸಲ್ಲಿಕೆಯಾದವು.
ತಿ.ನರಸೀಪುರ ಪಟ್ಟಣ ವಾರ್ಡುಗಳ ವ್ಯಾಪ್ತಿಯ ಜನಸಂಪರ್ಕ ಸಭೆ ಎಂದು ಪ್ರಚಾರ ಮಾಡಿದ್ದರೂ ವರುಣ ಕ್ಷೇತ್ರದ ಕಾರ್ಯಕರ್ತರೇ ಅರ್ಜಿಗಳನ್ನು ಹಿಡಿದು ನಿಂತಿದ್ದುದು ಜನರ ಕೆಂಗಣ್ಣಿಗೆ ಗುರಿಯಾಯಿತು.ಪುರಸಭೆ ನಿಕಟ ಪೂರ್ವ ಅಧ್ಯಕ್ಷ. ಟಿ.ಎಂ. ನಂಜುಂಡಸ್ವಾಮಿ ಮದನ್ ರಾಜ್,ಸೋಮಣ್ಣ , ಸಾಮಾಜಿಕ ನ್ಯಾಯ ಸಮಿತಿಯ ಮಾಜಿ ಅಧ್ಯಕ್ಷ ಸೈಯದ್ ಅಹ್ಮದ್, ಸದಸ್ಯರಾದ ತುಂಬಲ ಪ್ರಕಾಶ್, ಬಾದಾಮಿ ಮಂಜು, ಬೇಬಿ ಹೇಮಂತ್,
ಎಲ್.ಮಂಜು ನಾಥ್, ಮಾಜಿ ಸದಸ್ಯರಾದ ರಾಘವೇಂದ್ರ, ಕೆ.ಗಣೇಶ್, ಕರಿಯಪ್ಪ, ಪದವೀಧರ ಸಂಘದ ಜಿಲ್ಲಾಧ್ಯಕ್ಷ ಎಂ. ರಮೇಶ್, ತಾಲ್ಲೂಕು ಅಧ್ಯಕ್ಷ ಉಮೇಶ್, ಕೆಡಿಪಿ ಮಾಜಿ ಸದಸ್ಯ ಎಂ.ಮಿಥುನ್, ತಾ.ಪಂ.ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಸ್ವಾಮಿ, ಕುರುಬರ ಸಂಘದ ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ಪ್ರಶಾಂತ್ ಬಾಬು, ವರುಣ ಬ್ಲಾಕ್ ಅಧ್ಯಕ್ಷ ಮುದ್ದೇಗೌಡ, ಮಹಿಳಾ ಘಟಕದ ಅಧ್ಯಕ್ಷ ಕುಪ್ಯಾ ಭಾಗ್ಯಮ್ಮ, ಲತಾ ಜಗದೀಶ್, ಪ್ರಥಮ ದರ್ಜೆ ಗುತ್ತಿಗೆದಾರ ಕೆಂಪಯ್ಯನ ಹುಂಡಿ ಮಾಧು, ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತ ಕುಮಾರಿ, ವ್ಯವಸ್ಥಾಪಕ ಮಹೇಂದ್ರ ಮತ್ತಿತರರು ಹಾಜರಿದ್ದರು.