ಬಾಗೇಪಲ್ಲಿ: ಗ್ರಾಮೀಣ ಭಾಗದ ಮಕ್ಕಳಿಗೂ ಗುಣ ಮಟ್ಟದ ಶಿಕ್ಷಣ ದೊರೆಯಬೇಕು ಎಂದು ಸಮಾಜ ಸೇವಕ ಕದಿರನ್ನಗಾರಿಪಲ್ಲಿ ಅಶೋಕ್ ತಿಳಿಸಿದರು. ಪಟ್ಟಣದ ನ್ಯಾಷನಲ್ ಕಾಲೇಜು ಪಕ್ಕದ ರಸ್ತೆಯಲ್ಲಿ ಹಲೋ ಕಿಡ್ಸ್ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಒಂದು ದೇಶದ ಅಭಿವ್ರದ್ದಿಯನ್ನು ಸದರಿ ದೇಶದ ಶಿಕ್ಷಣದ ವ್ಯವಸ್ಥೆಯ ಮೇಲೆ ಅಳೆಯಲಾಗುತ್ತದೆ. ಶಾಲ ಶಿಕ್ಷಣವನ್ನು ಎರಡು ಬಗೆಯಾಗಿ ವಿಂಗಡಿಸಬಹುದು. ಅವುಗಳು, ಪ್ರಾಥಮಿಕ ಶಾಲ ಶಿಕ್ಷಣ ಮತ್ತು ಮಾಧ್ಯಮಿಕಶಾಲಾ ಶಿಕ್ಷಣ.
ತಂತ್ರಜ್ಞಾನದ ಬೆಳೆವಣಿಗೆಯೊಂದಿಗೆ ಶಿಕ್ಷಣ ರೀತಿಯಲ್ಲಿ ಅನೇಕ ಬದಲಾವಣೆಗಳಾಗಿವೆ.ಆನ್ಲೈನ್ ಶಾಲೆಗಳನ್ನು ಎಷ್ಟೋ ಮಂದಿ ಬಳಕೆಮಾಡುತ್ತಾರೆ.ಶಾಲೆ ಎಂಬ ಪರಿಕಲ್ಪನೆ ಪ್ರಾರಂಭವಾದದ್ದು ಗುರುಕುಲ ಎಂಬ ಶಿಕ್ಷಣ ವ್ಯವಸ್ತೆಯಿಂದ. ಶಿಕ್ಷಣದ ಮೊದಲ ಗುರಿ ಮಕ್ಕಳಲ್ಲಿ ತಿಳುವಳಿಕೆಯನ್ನು ತುಂಬುವುದು. ತಿಳುವಳಿಕೆ ಬೆಳೆಯುವ ಕ್ರಿಯೆ ಮನೆಯಲ್ಲಿ ಪ್ರಾರಂಭವಾಗಿ ಶಾಲೆಯಲ್ಲಿ ಮುಂದುವರೆಯಬೇಕು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಪ್ರಾರಂಭದಿಂದಲೇ ಮಕ್ಕಳಿಗೆ ಉತ್ತಮ ಗುಣ ಮಟ್ಟದ ವಿದ್ಯಾಭ್ಯಾಸ ಒದಗಿಸಿದಾಗ ಮಕ್ಕಳು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮತ್ತು ಪೋಷಕರಿಗೆ ಕೀರ್ತಿ ತರುತ್ತಾರೆ. ಅಡಿಪಾಯ ಗಟ್ಟಿ ಇದ್ದರೆ ಮಾತ್ರ ಮನೆ ಗಟ್ಟಿ ಇರುತ್ತದೆ. ಆದ್ದರಿಂದಲೇ ಚಿಣ್ಣರಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಅಗತ್ಯ. ಆ ನಿಟ್ಟಿನಲ್ಲಿ ಹಲೋ ಕಿಡ್ಸ್ ಶಾಲೆ ನಡೆಯಲಿದೆ ಎಂದರು. ಹಲೋ ಕಿಡ್ಸ್ ಶಾಲೆಯ ಮುಖ್ಯಸ್ಥೆ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರಾದ ವೈ.ಜಿ. ಕುಶಲ ಮಾತನಾಡಿ ಮಕ್ಕಳ ಕಲಿಕೆಗೆ ಬೇಕಾದ ಎಲ್ಲಾ ರೀತಿಯ ಉತ್ತಮ ಗುಣ ಮಟ್ಟದ ವಾತಾವರಣವನ್ನು ಕಲ್ಪಿಸಲಾಗಿದೆ. ಶಾಲೆಗೆ ಬರಲು ಸಾರಿಗೆ ವ್ಯವಸ್ಥೆ, ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ನುರಿತ ಶಿಕ್ಷಕರಿಂದ ಭೋದನೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಸೇರಿದಂತೆ ಹಲವು ಗಣ್ಯರಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ವಿಕಾಸ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಶಿವಣ್ಣ, ವಕೀಲ ರಾಮಚಂದ್ರಪ್ಪ, ಮುಖ್ಯ ಶಿಕ್ಷಕಿ ರಮಾದೇವಿ ಸೇರಿದಂತೆ ಮತ್ತಿತರರು ಹಾಜರಿದ್ದರು.
Leave a Review