This is the title of the web page
This is the title of the web page

ಮೊದಲ ಕ್ಷಯರೋಗ ಪರೀಕ್ಷೆ ಸೌಲಭ್ಯಗಳ ಉತ್ಪಾದನಾ ಘಟಕ ಉದ್ಘಾಟನೆ

ಬೆಂಗಳೂರು: ಮುಂಚೂಣಿಯಲ್ಲಿರುವ ಜಾಗತಿಕ ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್ ಕಂಪನಿಯಾದ ಸೆಫೀಡ್, ಇಂದು ಬೆಂಗಳೂರಿನ ಮಹದೇವ ಕೊಡಿಗೇಹಳ್ಳಿಯಲ್ಲಿ ಭಾರತದಲ್ಲಿ ತಮ್ಮ ಮೊದಲ ಉತ್ಪಾದನಾ ಘಟಕವನ್ನು ಆರಂಭಿಸಿದ್ದಾಗಿ ಪ್ರಕಟಿಸಿದೆ. 77,000 ಚದರ ಅಡಿ ಸೌಲಭ್ಯವು ಕಂಪನಿಯ ಉದ್ಯಮ- ಪ್ರಮುಖ ಕ್ಷಯರೋಗ ಪರೀಕ್ಷೆಯ ಕಾಟ್ರ್ರಿಡ್ಜ್ ಎಕ್ಸ್‍ಪರ್ಟ್‍ಗಳನ್ನು ಭಾರತ ಮತ್ತು ಇತರ ದೇಶಗಳಿಗೆ ತಯಾರಿಸಲಿದೆ.

ಈ ಸೌಲಭ್ಯವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಅಮೆರಿಕ ಸೆಫೀಡ್ ಕಾರ್ಯಾಚರಣೆ ವಿಭಾಗದ ಹಿರಿಯ ಉಪಾಧ್ಯಕ್ಷ ಲಾರೆಂಟ್ ಬಲ್ಲೋನ್, ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ತಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಐಎಎಸ್, ರಾಷ್ಟ್ರೀಯ ಆರೋಗ್ಯ ಮಿಷನ್ನ ನಿರ್ದೇಶಕ ಡಾ. ನವೀನ್ ಭಟ್ ವೈ, ಐಎಎಸ್, ದನ್ಹೇರ್ ಇಂಡಿಯಾ ಉಪಾಧ್ಯಕ್ಷ ರವಿಕುಮಾರ್ ವೆಂಕಟರಾಮನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸನ್ಮಾನ್ಯ ಡಾ.ಕೆ.ಸುಧಾಕರ್, “ದಕ್ಷಿಣ ಏಷ್ಯಾದಲ್ಲಿ ತನ್ನ ಮೊದಲ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಕರ್ನಾಟಕವನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಸೆಫೀಡ್ ಅನ್ನು ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಹೇಳಲು ಬಯಸುತ್ತೇನೆ. ಸಿಬಿಎನ್‍ಎಎಟಿ ಸಾಧನ ತಯಾರಿಕಾ ಘಟಕವು, 2025 ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತವನ್ನಾಗಿ ಮಾಡುವ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಬಲಗೊಳಿಸುತ್ತದೆ” ಎಂದು ಅಭಿಪ್ರಾಯಪಟ್ಟರು.