ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನದ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಸಂಶೋಧನೆಯ ಮೂಲಭೂತ ತತ್ತ್ವಕ್ಕೆ ಅನುಗುಣವಾಗಿ ಅತ್ಯುತ್ತಮ ಶಿಕ್ಷಣ ಮತ್ತು ಅಭಿವೃದ್ಧಿಗೆ ಪೂರಕವಾಗಿ ಬೆಂಗಳೂರಿನ ಗೀತಂ ಭಾಷಾಂತರ ಉಪಕ್ರಮಗಳ ಸಂಶೋಧನಾ ಕೇಂದ್ರದ ಬಹುಶಿಸ್ತೀಯ ಸಂಶೋಧನಾ ಕೇಂದ್ರವನ್ನು (Multidisciplinary Unit of Research on Translational Initiatives (MURTI) Research Centre)) ಉದ್ಘಾಟನೆ ಮಾಡಿದೆ.
ಈ ಬಹುಶಿಸ್ತೀಯ ಸಂಶೋಧನಾ ಉಪಕ್ರಮವು ಆವಿಷ್ಕಾರಕ ಮತ್ತು ಅರ್ಥಪೂರ್ಣವಾದ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸಮಾನಮನಸ್ಕರ ಸಹಯೋಗವನ್ನು ಒಟ್ಟುಗೂಡಿಸಲು ನೆರವಾಗುತ್ತದೆ. ವಿವಿಧ ಕ್ಷೇತ್ರಗಳ ಸಂಶೋಧಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ MURTI ಅನೇಕ ಸವಾಲುಗಳನ್ನು ಎದುರಿಸುವ ಸಲುವಾಗಿ ವಿವಿಧ ಹಿನ್ನೆಲೆಗಳ ಸಂಶೋಧಕರ ಸಾಮೂಹಿಕ ಪರಿಣತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.
ಹಗುರ ಯುದ್ಧ ವಿಮಾನ (LCA) ತೇಜಸ್ ಯೋಜನೆಯಕಾರ್ಯಕ್ರಮ ನಿರ್ದೇಶಕ ಮತ್ತು ಮುಖ್ಯ ವಿನ್ಯಾಸಕಾರ ಡಾ.ಕೋಟ ಹರಿನಾರಾಯಣ, ಚೆನ್ನೈನಲ್ಲಿ ಯುಎಸ್ ಕಾನ್ಸುಲೇಟ್ ನ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್, ಗೀತಂ ಕುಲಪತಿ ಡಾ.ವೀರೇಂದ್ರ ಸಿಂಗ್ ಚೌಹಾಣ್, ಉಪಕುಲಪತಿ ಪ್ರೊ . ದಯಾನಂದ ಸಿದ್ದವಟ್ಟಂ ಮತ್ತು ಬೆಂಗಳೂರು ಕ್ಯಾಂಪಸ್ನ ಪ್ರೊ ವಿಸಿ ಪ್ರೊ.ಕೆಎನ್ಎಸ್ ಆಚಾರ್ಯ ಸೇರಿದಂತೆ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.
ಖ್ಯಾತ ಎಂಜಿನಿಯರ್, ಶಿಕ್ಷಣ ತಜ್ಞ ಮತ್ತು ಹಗುರ ಯುದ್ಧ ವಿಮಾನ (LCA) ತೇಜಸ್ ಯೋಜನೆಯ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯ ವಿನ್ಯಾಸಕಾರ ಡಾ.ಕೋಟ ಹರಿನಾರಾಯಣ ಅವರು ಮಾತನಾಡಿ, `ಸುಸ್ಥಿರ ತಂತ್ರಜ್ಞಾನವು ಹೇಗೆ ಬೆಳೆಯಬೇಕೆಂಬುದರ ಬಗ್ಗೆ ಸಂಪೂರ್ಣ ಮರುಚಿಂತನೆಯನ್ನು ನಡೆಸುವ ಅಗತ್ಯವಿದೆ. ಗೀತಂ ದಾಖಲೆಯ ಸಮಯದಲ್ಲಿ MURTI ಯನ್ನು ಸ್ಥಾಪಿಸಿರುವುದು ನನಗೆ ಸಂತೋಷ ಎನಿಸಿದೆ.
13 ಪ್ರಮುಖ ಕ್ಷೇತ್ರಗಳೊಂದಿಗೆ ಇದು ಸರಿಯಾದ ಆರಂಭವಾಗಿದೆ ಮತ್ತು ಇವುಗಳು ನಾವು ಬದಲಾವಣೆಯನ್ನು ಮಾಡುವ ಕ್ಷೇತ್ರಗಳಾಗಿವೆ. ಗೀತಂ ಮಾತ್ರವಲ್ಲದೇ ಸಮಾಜಕ್ಕೂ ಇದರಿಂದ ಪ್ರಯೋಜನವಾಗುತ್ತದೆ. ವಿಶ್ವವಿದ್ಯಾನಿಲಯವನ್ನು ಉದ್ಯಮ ಮತ್ತು ಸಮಾಜದೊಂದಿಗೆ ಸಂಪರ್ಕಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.
ಚೆನ್ನೈನಲ್ಲಿ ಯುಎಸ್ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್ ಅವರು ಮಾತನಾಡಿ, “MURTI ಸಂಸ್ಥೆಯು ನಾವೀನ್ಯತೆ ಮತ್ತು ಸಹಭಾಗಿತ್ವಕ್ಕಾಗಿ ನಮಗೆ ಅಗತ್ಯವಿರುವ ಸಂಯೋಜನೆ ಮತ್ತು ಕ್ರಿಯಾತ್ಮಕವಾದ ಸಂಶೋಧನೆಗೆ ಒಂದು ಮಾದರಿಯಾಗಿದೆ. ಇದು ನಮ್ಮ ಆರ್ಥಿಕತೆ ಮತ್ತು ಸಂಬಂಧವನ್ನು ವೃದ್ಧಿಸಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.