This is the title of the web page
This is the title of the web page

ಡಾ. ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ – ಅಭಿವೃದ್ಧಿಗೊಂಡಿರುವ ನಾಯಂಡಹಳ್ಳಿ ಕೆರೆ ಲೋಕಾರ್ಪಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಪಂತರಪಾಳ್ಯದಲ್ಲಿ ನಿರ್ಮಿಸಿರುವ ಡಾ. ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅಭಿವೃದ್ಧಿಪಡಿಸಲಾಗಿರುವ ನಾಯಂಡಹಳ್ಳಿ
ಕೆರೆ ಲೋಕಾರ್ಪಣೆಯನ್ನು ಮುಖ್ಯಮಂತ್ರಿಯವರಾದ ಬಸವರಾಜ ಎಸ್. ಬೊಮ್ಮಾಯಿರವರು ಹಾಗೂ ವಸತಿ ಸಚಿವರಾದ ವಿ.ಸೋಮಣ್ಣರವರು, ಆರೋಗ್ಯ ಸಚಿವರಾದ ಕೆ.ಸುಧಾಕರ್,ಲೋಕಸಭಾ ಸದಸ್ಯರಾದ ಮುನಿಸ್ವಾಮಿ, ಚಲನಚಿತ್ರ ನಟ,ನಿರ್ಮಾಪಕ ಡಾ.ರಾಘವೇಂದ್ರ ರಾಜ್ ಕುಮಾರ್, ಚಲನಚಿತ್ರ ನಿರ್ಮಾಪಕರಾದ ಶ್ರೀಮತಿ ಆಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ವಲಯ ಆಯುಕ್ತರಾದ ದೀಪಕ್,ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್.ಆರ್.ರಮೇಶ್ ರವರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರವರು ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಆಸ್ಪತ್ರೆ ಮತ್ತು ನಾಯಂಡಹಳ್ಳಿ ಕೆರೆಯನ್ನು ಮಾನ್ಯ ಮುಖ್ಯಮಂತ್ರಿಗಳು ವೀಕ್ಷಣೆ ಮಾಡಿದರು. ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು ಮಾತನಾಡಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನರು ಅದೃಷ್ಟವಂತರು. ಸೋಮಣ್ಣರವರು ಎಲ್ಲರ ಬಾಳಿಗೆ ಅಣ್ಣನಾಗಿ ಕೆಲಸ ಮಾಡುತ್ತಿದ್ದಾರೆ.

ಪರಿಹಾರ, ಸಮಸ್ಯೆ ಪರಿಹಾರ ಮತ್ತು ಅಭಿವೃದ್ದಿಗೆ ಎಲ್ಲ ಸೌಲಭ್ಯ ಸಹಕಾರ ಬೇಕು ಎಂದು ವಿ.ಸೋಮಣ್ಣರವರಂತಹ ವ್ಯಕ್ತಿಗಳು ಬೇಕು.ನಂಬಿದ ಜನರಿಗೆ, ವಿಶ್ವಾಸಕ್ಕೆ ನಿಷ್ಠೆಯಿಂದ,ಭಾವನೆಯಿಂದ 24ಘಂಟೆಗಳ ಕಾಲ ಜನಸೇವೆ ಮಾಡುವ ಸೋಮಣ್ಣರವರು ನಿಜವಾದ ಜನನಾಯಕ. 3ಲಕ್ಷ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ, ರಾಜ್ಯದಲ್ಲಿ 5ಲಕ್ಷ ಮನೆ ನಿರ್ಮಿಸಲಾಗಿದೆ.

ಬೆಂಗಳೂರು ನಗರ ಬ್ರಾಂಡ್ ಬೆಂಗಳೂರು ಆಗಿದೆ, ವಿದೇಶದಲ್ಲಿಯೊ ಸಹ ನಗರ ಖ್ಯಾತಿ ಇದೆ. ಪ್ರತಿದಿನ 50ಸಾವಿರ ಜನರು ವಲಸೆ ಬರುತ್ತಾರೆ,5000ಹೊಸ ವಾಹನ ರಸ್ತೆಗೆ ಬರಲಿದೆ ಪ್ರತಿದಿನ. 7000ಸಾವಿರ ಸಿಸಿ ಕ್ಯಾಮರ ಮಹಿಳೆಯರಿಗೆ ಸುರಕ್ಷತೆ ಆಳವಿಡಸಲಾಗಿದೆ. ರಾಜಾಕಾಲುವೆ 1000ಕೋಟಿ ಅನುದಾನ ಬೆಂಗಳೂರುನಗರ ಅಭಿವೃದ್ದಿಗೆ 6500ಕೋಟಿ ಅನುದಾನ ನೀಡಿದೆ. ನಾಡಪ್ರಭು ಕೆಂಪೇಗೌಡ ಬೆಂಗಳೂರು ಸುಂದರವಾಗಿದೆ.ಬೆಂಗಳೂರು ಹೆಸರು ಉಳಿಸುವುದು ಬಹಳ ಕಷ್ಟ,ಹಾಳು ಮಾಡುವುದು ಸುಲಭ. ಎಲ್ಲ ಸಹಕಾರದಿಂದ ಬೆಂಗಳೂರು ಉತ್ತಮ ಹೆಸರು ಬರಲಿದೆ ಎಂದು ಹೇಳಿದರು.

ಸಚಿವ ವಿ.ಸೋಮಣ್ಣರವರು ಮಾತನಾಡಿ ಕರ್ನಾಟಕ ರತ್ನ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ರವರ ಸ್ಮರಣೆಯಲ್ಲಿ ಪಂತರ
ಪಾಳ್ಯ ಸುತ್ತಮುತ್ತಲ ನಿವಾಸಿಗಳಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಸ್ಲಂ ಪ್ರದೇಶ, ಕಳ್ಳಕಾರರು ಪ್ರದೇಶವಾಗಿದ್ದ ಸ್ಥಳೀಯರ ಜನರ ಆಶೀರ್ವಾದದಿಂದ ಡಾ.ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ.

ದಾಸರಹಳ್ಳಿ ಎಂ.ಸಿ.ಲೇಔಟ್ 300ಹಾಸಿಗೆ ಮತ್ತು ಪಂತರಪಾಳ್ಯ 205 ಮತ್ತು 10ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 23ಸರ್ಕಾರಿ ಶಾಲೆಗಳಲ್ಲಿ 22ಶಾಲೆ ಆಧುನೀಕರಣ ಮತ್ತು 108ಶುದ್ದ ಕುಡಿಯುವ ನೀರಿನ ಘಟಕ, ನೂತನ ಪೊಲೀಸ್ ಠಾಣೆ ಹಾಗೂ 60ಕ್ಕೂ ಉದ್ಯಾನವನಗಳ ನವೀಕರಿಸಲಾಗಿದೆ.

ಕೊಳಚೆ ನೀರು ಶುದ್ದೀಕರಿಸಿ ಘಟಕ ಸ್ಥಾಪನೆ ಮಾಡಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 40ಹಾಸಿಗಳ ಶಿಶುಗಳ ಆರೈಕೆ ಕೇಂದ್ರ. 45ವರ್ಷಗಳ ರಾಜಕೀಯ ಅನುಭವದಲ್ಲಿ 8ಮುಖ್ಯಮಂತ್ರಿಗಳ ಜೊತೆಯಲ್ಲಿ ಕೆಲಸ ಮಾಡಿದ್ದೇನೆ ಏಳು ಐ.ಎ.ಎಸ್.ತರಭೇತಿ ಕೇಂದ್ರವಿದೆ. ಸಾಮಾನ್ಯ ಜನರ ಒಡನಾಡಿಯಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.