ಕನಕಪುರ: ಪ್ರಸಿದ್ಧ ಬಣ್ಣಾರಿ ಮಾರಮ್ಮ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ದೇವಾಲಯ ಉದ್ಘಾಟನಾ ಕಾರ್ಯಕ್ರಮ ವಿಜೃಂಭಣೆಯಿಂದ ನೇರವೇರಿಸಲಾಯಿತು.
ತಾಲ್ಲೂಕಿನ ಕಸಬಾ ಹೋಬಳಿಯ ತಾಮಸಂದ್ರ ಸರ್ಕಲ್ ಗ್ರಾಮದಲ್ಲಿ ಏ. 17 ರ ಬುಧವಾರ ಸಂಜೆ ಗೋಧೊಳಿ ಲಗ್ನದಲ್ಲಿ ಮೈಸೂರಿನ ವೇದಮಾತಾ ಗುರುಕುಲದ ಡಾ. ಮಂಜುನಾಥ ಆರಾಧ್ಯ ಹಾಗೂ ಚಿಕ್ಕ ಮಗಳೂರಿನ ಶ್ರೀ ದೇವಿ ಗುರುಕುಲದ ಡಾ.ದಯಾನಂದ ಶಾಸ್ತ್ರಿಗಳು ಹಾಗೂ ಶ್ರೀ ರಾಮ ಸಾಗರದ ಪುರೋಹಿತರಾದ ಮುನೇಶ್ ಶಾಸ್ತ್ರಿ ಗಳ ನೇತೃತ್ವದಲ್ಲಿ ಗೋ ಪೂಜೆ ಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೇರವೇರಿಸಲಾಯಿತು.
ಗುರುವಾರ ಬೆಳಗಿನ ಜಾವ ದೇವಿಯ ಮಹಾಸಂಕಲ್ಪ ದೊಂದಿಗೆ ಗಣಪತಿ ಹೋಮ ಸೇರಿದಂತೆ ನವಗ್ರಹ, ಮೃತ್ಯುಂಜಯ, ಅಷ್ಟಲಕ್ಷ್ಮಿ,ನವ ದುರ್ಗೆಯರ ಹೋಮ ಗಳು ನೂರಾರು ಭಕ್ತರ ಸಮ್ಮುಖದಲ್ಲಿ ನಡೆಸಲಾಯಿತುಶುಕ್ರವಾರ ಬೆಳ್ಳಗೆ ಬ್ರಾಹ್ಮಿ ಮಹೂರ್ತದಲ್ಲಿ ಬಣ್ಣಾರಿ ಅಮ್ಮನವರ ನೂತನ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಿ ವಿವಿಧ ಪೂಜಾ ವಿಧಿ ವಿಧಾನಗಳ ನಂತರ ಬೆಳ್ಳಗೆ 10.30 ಕ್ಕೆ ಮಹಾಮಂಗಳಾರತಿ ನೆರವೇರಿಸಿ ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು, ಮೂರು ದಿನಗಳ ಕಾಲ ನಡೆದ ಈ ವಿಜೃಂಭಣೆಯ ಕಾರ್ಯಕ್ರಮಕ್ಕೆ ತಾಲ್ಲೂಕಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂಧು ತಾಯಿಯ ದರ್ಶನ ಪಡೆದು ಧನ್ಯರಾದರು.