ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿಯಲ್ಲಿ ನವ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀನಾಥ್ ಕೊಡಿಹಳ್ಳಿ ಅವರು ಇಂದು ನವ ಕರ್ನಾಟಕ ರೈತ ಸಂಘದ ಕಾರ್ಯಾಲಯ ಉದ್ಘಾಟನೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ದಯಾನಂದ ಪಾಟೀಲ್ ಅವರು ಕಾರ್ಯಾಲಯ ಉದ್ಘಾಟನೆಯನ್ನು ನೆರವೇರಿಸಿ,
ನಂತರದಲ್ಲಿ ಮಾತನಾಡಿದ ಅವರು ರೈತರು ಸರಳ ಬದುಕನ್ನು ಮೈಗೂಡಿಸಿಕೊಂಡು, ಅಜ್ಞಾನ ಮತ್ತು ಮೌಢ್ಯದಿಂದ ಹೊರಬಂದಾಗ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಪ್ರಸ್ತುತ ದೇಶದೆಲ್ಲೆಡೆ ವಿವಿಧ ಕಾರಣಗಳಿಂದಾಗಿ ರೈತರು ಆತ್ಯಹತ್ಯೆಗೆ ಶರಣಾಗುತ್ತಿದ್ದಾರೆ.
ಆಡಳಿತ ನಡೆಸುವ ಸರ್ಕಾರಗಳೇ ನೇರ ಹೊಣೆ. ರೈತರ ನೋವು ಯಾರಿಗೂ ಅರ್ಥವಾಗುತ್ತಿಲ್ಲಾ, ಈ ದೇಶವನ್ನಾಳಿದ ಯಾವುದೇ ರಾಜಕೀಯ ಪಕ್ಷಗಳು ರೈತರ ಹಿತಕಾಯುವಲ್ಲಿ ವಿಫಲವಾಗಿವೆ. ಹಾಗಾಗಿ ಗ್ರಾಮ ಮಟ್ಟದಿಂದ ರೈತರನ್ನು ಸಂಘಟಿಸುವ ಸಲುವಾಗಿ ಚಿಂತಾಮಣಿಯಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ ಹಾಗೂ ಇತ್ತಿಚಿಗೆ ಅತಿವೃಷ್ಟಿ ಅನಾವೃಷ್ಟಿಯಿಂದ ರಾಜ್ಯದಲ್ಲಿ ಭಿಕರ ಬರಗಾಲ ಬಿದ್ದು ರೈತರು ಸಂಕಷ್ಟದಲ್ಲಿದ್ದಾರೆ , ಸರ್ಕಾರ ತಕ್ಷಣ ರೈತರ ನೇರವಿಗೆ ಬರಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸುತ್ತೇನೆ.ಎಂದು ನುಡಿದರು.
ನಂತರ ಶ್ರೀನಾಥ್ ಕೋಡಿಹಳ್ಳಿ ಅವರನ್ನು ಅಭಿನಂದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ತುಮಕೂರು ರಾಜ್ಯ ಕಾರ್ಯದರ್ಶಿಗಳು, ಬಸವರಾಜ ಸ್ವಾಮಿ ರಾಯಚೂರು ರಾಜ್ಯ ಸಂಘಟನಾ ಕಾರ್ಯದರ್ಶಿ, ವೆಂಕಟೇಶ್ ಮಾಸ್ಟರ್ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ, ರೈತ ಮುಖಂಡರಾದ ನಾರಾಯಣ ಸ್ವಾಮಿ, ಮಂಜುಳಾ ರೆಡ್ಡಿ, ರತ್ನಮ್ಮ ಹಾಗೂ ಇನ್ನೂ ವಿವಿಧ ಜಿಲ್ಲೆಗಳ ರೈತಾಪಿ ವರ್ಗದವರು ಉಪಸ್ಥಿತರಿದ್ದರು.