This is the title of the web page
This is the title of the web page

ಕನ್ನಮಂಗಲ ಗ್ರಾಮ ಪಂಚಾಯತಿ ಕಾರ್ಯಾಲಯದ ನೂತನ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ಸಭಾಂಗಣ ಉದ್ಘಾಟನೆ

ದೇವನಹಳ್ಳಿ: ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯದ ನವೀಕರಣ ಹಾಗೂ ರಾಜೀವ್ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಮತ್ತು ಸಭಾಂಗಣ ಉದ್ಘಾಟನಾ ಸಮಾರಂಭ ನಡೆಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಕನ್ನ  ಮಂಗಲ ಗ್ರಾಪಂಯ ನವೀಕರಣ ಗ್ರಾಪಂ ಆಕರ್ಷ
ನೀಯ ಕಟ್ಟಡ, ಸಭಾಂಗಣಾ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಲ್.ಎನ್.ನಾರಾಯಣ ಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ದ್ಯಾವರಹಳ್ಳಿ ವಿ.ಶಾಂತಕುಮಾರ್, ಮಾಜಿ ಶಾಸಕರುಗಳಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಶೆಟ್ಟಿಗೆರೆ ರಾಜಣ್ಣ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್ ಸೇರಿದಂತೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಹಲವಾರು ಮುಖಂಡರು ಭಾಗಿಯಾಗುವುದರ ಮೂಲಕ ಗ್ರಾಪಂ ನೂತನ ಕಟ್ಟಡವನ್ನು ವೀಕ್ಷಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತನಾಡಿ, ಕನ್ನಮಂಗಲ ಗ್ರಾಪಂ ಅತ್ಯಾಧುನಿಕ ಕಚೇರಿಯನ್ನು ಹೊಂದಿರುವ ಗ್ರಾಮಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಕಾಂತ್, ಮುಖಂಡರಾದ ಕೆ.ಸಿ.ಮಂಜುನಾಥ್, ಮಾಜಿ ಗ್ರಾಪಂ ಅಧ್ಯಕ್ಷ ನಾಗೇಶ್ ಸೇರಿದಂತೆ ಎಲ್ಲಾ ಸಂಬಂಧಿಸಿದ ಸದಸ್ಯರು ಮತ್ತು ಮುಖಂಡರೆಲ್ಲರೂ ಸೇರಿ ಆಕರ್ಷನೀಯ ಮತ್ತು ಅತ್ಯಾಧುನಿಕ ಸೌಲಭ್ಯವುಳ್ಳ ಮಾದರಿ ಗ್ರಾಪಂ ಅನ್ನು ಉದ್ಘಾಟನೆ ಮಾಡಿದ್ದಾರೆ. ಇದು ಬೆಂಗಳೂರಿಗೆ ಹತ್ತಿರವಾದಂತಹ ಪಂಚಾಯಿತಿಯಾಗಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಪಂಚಾಯಿತಿಯಾಗಿರುವುದರಿಂದ ಈ ಪಂಚಾಯಿತಿಯನ್ನು ವಿಕ್ಷೀಸಿದಾಗ ನನ್ನ ಅನುಭವದಂತೆ ಈಗೀನ ಕಾಲಕ್ಕೆ ಇಂತಹವೊಂದು ಗ್ರಾಪಂ ಕಚೇರಿ ಬೇಕಾಗಿರುತ್ತದೆ. ಇದೇ ಮಾದರಿಯಲ್ಲಿ ಬೇರೆ ಗ್ರಾಪಂಗಳು ಸಹ ಎಲ್ಲಾ ಸೌಲಭ್ಯಗಳನ್ನು ಹೊಂದುವುದರ ಮೂಲಕ ಮಾದರಿಯಾಗಬೇಕು ಎಂದರು.

ಇನ್ನೂ ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಿ.ಶಾಂತಕುಮಾರ್ ಗ್ರಾಪಂಗೆ ಆಗಮಿಸಿ, ಗ್ರಾಪಂ ಸದಸ್ಯರು, ಅಧ್ಯಕ್ಷರು ಮತ್ತುಉಪಾಧ್ಯಕ್ಷರನ್ನು ಒಳಗೊಂಡಂತೆ ಈ ಹಿಂದಿನ ಅಧ್ಯಕ್ಷರು ಒಗ್ಗೂಡಿ ಮಾದರಿ ಪಂಚಾಯಿತಿಯನ್ನಾ ಗಿಸಿದ್ದಾರೆ. ಈ ದಿನದಲ್ಲಿ ಎಲ್ಲಾ ಮುಖಂಡರು ಸೇರಿ ಸಮಾರಂಭದಲ್ಲಿ ಭಾಗವಹಿಸುವುದರ ಮೂಲಕ ಶುಭಕೋರಲಾಗಿದೆ ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷ ಲಕ್ಷ್ಮೀಕಾಂತ ಮಾತನಾಡಿಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರ ಪರವಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ, ಆದ್ದರಿಂದ ಗ್ರಾಮಸ್ಥರ ಪ್ರತಿಯೊಬ್ಬರ ಮನೆಯಲ್ಲಿ ಶಾಂತಿ ನೆಮ್ಮದಿ ಇರಲಿ ಎಂದು ಹಾರೈಸಿದರು, ಮುಂದಿನ ದಿನಗಳಲ್ಲಿ ಸಹ ಪಂಚಾಯಿತಿಯ ಅಭಿವೃದ್ಧಿಗೆ ಗ್ರಾಮದ ಪ್ರತಿಯೊಬ್ಬರು ಒಗ್ಗೂಡಿ ಆರ್ಥಿಕವಾಗಿ ಪಂಚಾಯಿತಿಯನ್ನು ಮುನ್ನಡೆಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ರೇವಣಪ್ಪ, ತಾಲೂಕು ಪಂಚಾಯಿತಿ  ವಸಂತ್ ಕುಮಾರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಆಗಮಿಸಿದ ಗಣ್ಯರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ
ಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ. ಮಂಜುನಾಥ್, ಮುಖಂಡರಾದ ಲಕ್ಷ್ಮಣ್‍ಗೌಡ, ನಾಗೇಗೌಡ, ಶ್ರೀನಿವಾಸ್, ಸಂದೀಪ್, ಗ್ರಾಪಂ ಅಧ್ಯಕ್ಷ ಲಕ್ಷ್ಮೀಕಾಂತ, ಉಪಾಧ್ಯಕ್ಷೆ ನೇತ್ರಾವತಿ. ಜಿ.ಮುನಿಶಾಮಪ್ಪ, ಸದಸ್ಯರಾದ ವೆಂಕಟಸ್ವಾಮಿ (ಅಪ್ಪು).ಎಸ್ ಜಿ.ಮಂಜುನಾಥ್, ಅಂಬುಜಾ ಕೃಷ್ಣಪ್ಪ, ನಿವಿತ ಮಂಜುನಾಥ್, ಉಗನವಾಡಿ ಮಂಜುನಾಥ್, ನರಸಿಂಹಮೂರ್ತಿ, ಮುಖಂಡ ದುಬಾಯಿ ಮಂಜುನಾಥ್, ಪಿಡಿಒ ಆದರ್ಶ್ ಕುಮಾರ್, ಸಿಬ್ಬಂದಿ ಇದ್ದರು.