ಗೌರಿಬಿದನೂರು: ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಷ್ಟೆ ಸಮರ್ಥವಾಗಿ ಕಾರ್ಯನಿರ್ವಹಿಸುವ ಮೂಲಕ ಇಂದು ವಿಶ್ವ ಗಮನ ಸೆಳೆದಿದ್ದಾಳೆ ಎಂದು ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ.ಸುರೇಶ್ ಅಭಿಪ್ರಾಯಪಟ್ಟರು.
ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ವೋದಯ ಮಹಿಳಾ ಮಂಡಲದ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ಸರ್ವೋದಯ ಮಂಡಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಳಿ ಶಾಖೆಗಳನ್ನು ಆರಂಭಿಸುವ ಮೂಲಕ ಗಾಂಧಿ ತತ್ವ ಸಿದ್ದಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ಧೇಶವಿದೆ. ಇಂದಿನ ಯುವ ಜನಾಂಗದಲ್ಲಿ ಗಾಂಧೀಜಿ ಆದರ್ಶಗಳ ನ್ನು ರೂಢಿಸಿಕೋಳ್ಳಬೇಕಾಗಿದೆ ದರು.
ಜಿಲ್ಲಾ ನೂತನ ಸರ್ವೋದಯ ಮಹಿಳಾ ಮಂಡಲದ ಅಧ್ಯಕ್ಷೆ ಪದ್ಮಾ ಗುಂಡಾಪುರ ಮಾತನಾಡಿ ಸರ್ವೋದಯ ಎಂದರೆ? ಸರ್ವರ ಪ್ರಗತಿ ಏಳಿಗೆ.ಉದ್ದಾರ.ಸರ್ವರ ಹಿತವೇ ಆಗಿದೆ.ಎಲ್ಲರ ಏಳಿಗೆ ಆಗಬೇಕು ಎಂಬುವುದು ಗಾಂಧೀಜಿ ಅವರ ಬಯಕೆಯಾಗಿತ್ತು.
ರಾಷ್ಟಪಿತ ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನವನ್ನು ಸರ್ವೋದಯ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತಿದೆ.
ಸತ್ಯ ಅಹಿಂಸೆ ಸರಳತೆ ಹಿರಿಯರನ್ನು ಗೌರವಿಸುವ ಗುಣಗಳು ಯುವ ಜನತೆ ಅಳವಡಿಸಿಕೊಳ್ಳಬೇಕು. ಅಹಿಂಸಾತ್ಮಕವಾದ ಹೋರಾಟದ ಮೂಲಕ ದೇಶದ ಸ್ವಾತಂತ್ರ್ಯ ಗಳಿಸಿದ ನಂತರ ಗಾಂಧೀಜಿ ಅವರ ದೃಷ್ಟಿಕೋನ ಸರ್ವೋದಯವಾಗಿತ್ತು. ಇದು ಗಾಂಧೀಜಿ ಕಲ್ಪಿಸಿಕೊಂಡ ಆದರ್ಶ ಸಮಾಜದ ವ್ಯವಸ್ಥೆ ಸರ್ವರ ಪ್ರಗತಿಯೇ ಇದರ ಉದ್ದೇಶವಾಗಿತ್ತು.
ಕರ್ನಾಟಕ ಸರ್ವೋದಯ ಮಂಡಲ ಕಾರ್ಯದರ್ಶಿ ದೊಡ್ಡಯ್ಯ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕಾಗಿದೆ.ಮಹಿಳೆಯರು ತಮ್ಮ ಮನೆಗಳಲ್ಲಿ ಉತ್ಪಾದನೆ ಮಾಡುವ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸಲಾಗುವುದು ಎಂದರು.
ಡಾ.ಸಿ.ನಾಗರತ್ನಮ್ಮ. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ.ಚಂದ್ರಶೇಖತ ರೆಡ್ಡಿ. ಆಶಾ ಜಗದೀಶ್. ದಸ್ತಗಿರಿಸಾಬ್ ಎನ್. ಬಾಲಪ್ಪ.ಟಿ.ಸಿ. ಪ್ರಭಾ. ಲಕ್ಷ್ಮೀ. ರಾಮಕೃಷ್ಣ. ಮೊಹಿನ್. ರಾಜಮ್ಮ. ನರಸಮ್ಮ ಮತ್ತಿತರರು ಇದ್ದರು.