ನೆಲಮಂಗಲ: ಸೋಲೂರು ಹೋಬಳಿ ಮುಮ್ಮೆನಹಳ್ಳಿ ಗ್ರಾಮದಲ್ಲಿ ನೆಲೆಸಿ ಅಪಾರ ಭಕ್ತ ಸಮೂಹವನ್ನು ಹೊಂದಿರುವ ಶ್ರೀ ನಾಗಮ್ಮದೇವಿಯವರ ನೂತನ ವಿಗ್ರಹ, ಪ್ರಾಣ ಪ್ರತಿಷ್ಠಪನಾ ದೇವಾಲಯ ಉದ್ಘಾಟನೇ ಮಾಡಲಾಯಿತು.
ಈ ಸಂಬಂಧವಾಗಿ ದೇವಾಲಯದಲ್ಲಿ ವಿಶೇಷ ಪೂಜಾಧಿಕಾರ್ಯಗಳು ಹೋಮ ಹವನಾದಿಗಳು ನಡೆದವು ಸೋಮವಾರ ರಾತ್ರಿ ಗಣಪತಿ ಹೋಮ, ನವಗ್ರಹ ಹೋಮ, ಆತೋರ ಹೋಮ, ಕಲಾ ಹೋಮ, ರಾಕ್ಷೆಜ್ಞ ಹೋಮ, ಬಲಿಹರಣ, ಪೀಠಸ್ಥಾಪನೆ, ಚಕ್ರ ಸ್ಥಾಪನೆ, ಅಮ್ಮನವರಿಗೆ ಅದಿವಾಸಗಳು, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಮಂಗಳವಾರ ಶ್ರೀ ನಾಗಮ್ಮದೇವಿಯ ಪ್ರಾಣಪ್ರತಿಷ್ಠೆ, ನೇತ್ರೋನ್ನಿಲನ, ದೃಷ್ಟಿ ನಂತರ ಗರ್ಭಗುಡಿ ಗೋಪುರಕ್ಕೆ ಕಳಸರೋಹಣ ನಂತರ ಪ್ರಾಣ ಪ್ರತಿಷ್ಠಾಪನಾ ಹೋಮ, ತ್ರಿಶಕ್ತಿಯರ ಹೋಮ, ವಾಸ್ತು ಹೋಮ, ಅಷ್ಟದಿಕ್ವಾಲಕರ ಹೋಮ, ಜಯಾದಿ ಪ್ರಾಯಶ್ಚಿತ್ತ ಹೋಮ ನಂತರ ದೇನುದರ್ಪಣ, ಕದಳಿಛೇದನ, ಮಹಾಪೂರ್ಣಾಹುತಿ, ಅಲಂಕಾರ, ವೇದಘೋಷ, ಮಂತ್ರಪುಷ್ಪ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.
ಹಾಗೂ ವಿಶೇಷವಾಗಿ ಮಂಡ್ಯ ಜಿಲ್ಲೆ ಸುಪ್ರಸಿದ್ಧ ಹೆಸರಾಂತ ಗಾಯಕರಾದ ಶಿವಾರ ಉಮೇಶ್ ಹಾಗೂ ತಂಡದವರಿಂದ ಭಕ್ತಿಗೀತೆಗಳ ಮನರಂಜನಾ ಕಾರ್ಯಕ್ರಮ” ವನ್ನು ಏರ್ಪಡಿಸಲಾಗಿತ್ತು.ಇದೆ ಸಂದರ್ಭದಲ್ಲಿ ಮೋಟಾಗನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಂಗನಾಥ ಮಾತನಾಡಿ ಅಕ್ಕ ಪಕ್ಕದ ಗ್ರಾಮಸ್ಥರ ಸಹಕಾರದಿಂದ ಶ್ರೀಮತಿ ಪ್ರೇಮ ಮತ್ತು ಶ್ರೀ ರವಿಕುಮಾರ್ ರವರ ಅಧ್ಯಕ್ಷತೆಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ದೇವಸ್ಥಾನ ಪ್ರತಿಷ್ಠಾಪನಾ ಗೊಂಡಿದೆ ಪ್ರತಿ ಸೋಮವಾರ, ಶುಕ್ರವಾರ ಪೂಜೆ ನಡೆಯುವ ದೇವಿಗೆ ಅಪಾರ ಭಕ್ತಾದಿಗಳ ಆಗಮಿಸುತ್ತಿದ್ದು ಅವರ ಕಷ್ಟಗಳನ್ನು ನೆರವೇರಿಸುತ್ತ ಸುತ್ತ ಮತ್ತ ಹಳ್ಳಿಗಳಿಗೆ ಹೆಸರಾಂತ ದೇವಿಯಾಗಿ ಶ್ರೀ ನಾಗಮ್ಮದೇವಿ ನೆಲೆಸಿದ್ದಾರೆ ಎಂದರು.