ಬೆಂಗಳೂರು: ಶೆವ್ರಾನ್ ಇಂಜಿನ್ (ಇಂಜಿನಿಯರಿಂಗ್ ಮತ್ತು ಇನ್ನೋವೇಶನ್ ಎಕ್ಸಲೆನ್ಸ್ ಸೆಂಟರ್), ಎನ್ಜಿಒ ಪೈ ಜಾಮ್ ಫೌಂಡೇಶನ್ ಸಹಯೋಗದೊಂದಿಗೆ ಬೆಂಗಳೂರಿನ
ಆರು ಸರ್ಕಾರಿ ಶಾಲೆಗಳಲ್ಲಿ ಹೊಸ ಸ್ಟೆಮ್ (ವಿಜ್ಞಾನ, ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಗಣಿತ) ಲ್ಯಾಬ್ಗಳನ್ನು ಉದ್ಘಾಟಿಸಿದೆ. ಈ ಉಪಕ್ರಮವು ೩ ರಿಂದ ೮ನೇ ತರಗತಿಯ ೧,೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಆಯಾ ಶಾಲೆಗಳ ಒಟ್ಟು ೩೨ ಶಿಕ್ಷಕರಿಗೆ ಪ್ರಯೋಜನ ನೀಡಲಿದೆ.
ಉದ್ಘಾಟನಾ ಸಮಾರಂಭವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಜಿಹೆಚ್ಪಿಎಸ್) ಪರಪ್ಪನ ಅಗ್ರಹಾರ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಯಸಂದ್ರದಲ್ಲಿ ನಡೆಯಿತು. ಶೆವ್ರಾನ್ ಇಂಡಿಯಾದ ಕಂಟ್ರಿ ಹೆಡ್ ಡಾ. ಅಕ್ಷಯ್ ಸಾಹ್ನಿ, ಆಯಾ ಶಾಲೆಗಳ ಮುಖ್ಯ ಶಿಕ್ಷಕಿಯರು ಮತ್ತು ಪೈ ಜಾಮ್ ಫೌಂಡೇಶನ್ನ ಸಿಇಒ ಹಾಗೂ ಸಹ-ಸಂಸ್ಥಾಪಕ ಶೋಯೆಬ್ ಡಾರ್ ಅವರೊಂದಿಗೆ ಸೇರಿ ಔಪಚಾರಿಕವಾಗಿ ಲ್ಯಾಬ್ಗಳನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಜಿಹೆಚ್ಪಿಎಸ್ ಪರಪ್ಪನ ಅಗ್ರಹಾರದ ಮುಖ್ಯ ಶಿಕ್ಷಕಿ ಶ್ರೀಮತಿ ಭವಿತಾ ಎಂ.ಎಸ್. ಮತ್ತು ಜಿಹೆಚ್ಪಿಎಸ್ ರಾಯಸಂದ್ರದ ಮುಖ್ಯ ಶಿಕ್ಷಕಿ ಶ್ರೀಮತಿ ವೆಂಕಟೇಶಮ್ಮ ಕೆ., ಶಾಲಾ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಸಮಾರಂಭದಲ್ಲಿ ಮಾತನಾಡಿದ ಡಾ. ಅಕ್ಷಯ್ ಸಾಹ್ನಿ, “ಶೆವ್ರಾನ್ನಲ್ಲಿ, ಜನರು ಮತ್ತು ಸಮುದಾಯಗಳು ಏಳಿಗೆ ಹೊಂದಿದಾಗ ನಮ್ಮ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ ಎಂದು ನಾವು ನಂಬುತ್ತೇವೆ. ಶಿಕ್ಷಣ ಮತ್ತು ತಂತ್ರಜ್ಞಾನದ ಮೂಲಕ ಸಮುದಾಯಗಳನ್ನು ಸಶಕ್ತಗೊಳಿಸುವ ವಿಶಾಲ ದೃಷ್ಟಿಕೋನದ ಆರಂಭವಿದು. ಒಟ್ಟಾಗಿ, ನಾವು ಬಲವಾದ ಸಮುದಾಯಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ಪ್ರಗತಿ, ಪ್ರಭಾವ ಹಾಗೂ ಶಾಶ್ವತ ಮೌಲ್ಯವನ್ನು (lasting value) ಮುನ್ನಡೆಸುತ್ತಿದ್ದೇವೆ,” ಎಂದು ಹೇಳಿದರು.



