ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಬೆಂಗಳೂರುನಗರ ಬಿಜೆಪಿ ಕಛೇರಿಯಲ್ಲಿ ಮಾಜಿ ಉಪಮಹಾಪೌರರಾದ ಉತ್ತರ ಜಿಲ್ಲಾಧ್ಯಕ್ಷರಾದ ಎಸ್.ಹರೀಶ್ ರವರು ಮತ್ತು ಕೇಂದ್ರ ಜಿಲ್ಲಾಧ್ಯಕ್ಷರಾದ ಸಪ್ತಗಿರಿಗೌಡರವರು ಕಛೇರಿ ಉದ್ಘಾಟನೆ ಸಮಾರಂಭ ಏರ್ಪಾಡು ಮಾಡಲಾಗಿತ್ತು.
ಮಾಜಿ ಸಚಿವರು ಹಾಗೂ ಶಾಸಕರಾದ ಕೆ.ಗೋಪಾಲಯ್ಯ, ಡಾ||ಸಿ.ಎನ್.ಅಶ್ವಥ್ ನಾರಾಯಣ್, ಶಾಸಕರಾದ ಮುನಿರಾಜು, ಮಾಜಿ ಶಾಸಕನೆ.ಲ.ನರೇಂದ್ರಬಾಬು, ಎಸ್.ಹರೀಶ್, ಸಪ್ತಗಿರಿಗೌಡರು ಗಣೇಶಪೂಜೆ ಸಲ್ಲಿಸಿ, ಕಛೇರಿ ಉದ್ಘಾಟನೆ ಮಾಡಿದರು.
ಜಿಲ್ಲಾಧ್ಯಕ್ಷರಾದ ಎಸ್.ಹರೀಶ್ ರವರು ಮಾತನಾಡಿ ದೇಶ ಮೊದಲು ನಂತರ ಪಕ್ಷ ಅಮೇಲೆ ವ್ಯಕ್ತಿ ಮುಖ್ಯ ಎಂದು ರಾಷ್ಟ್ರ ಭಕ್ತಿ ಸಾರುವ ಪಕ್ಷ ಬಿಜೆಪ ಅಂತಹ ಪಕ್ಷದ ಕಾರ್ಯಕರ್ತರು ಎಂದರೆ ಹೆಮ್ಮೆಯ ವಿಷಯ.
ಪ್ರಧಾನಿ ನರೇಂದ್ರಮೋದಿರವರ 10 ವರ್ಷದ ಆಡಳಿತದಲ್ಲಿ ಭಾರತ ದೇಶ ಆರ್ಥಿಕತೆ ನಾಲ್ಕನೇಯ ಸ್ಥಾನ ಹಾಗೂ ವಿಶ್ವದ ಬಲಿಷ್ಠ ರಾಷ್ಟ್ರ ಎಂದು ಖ್ಯಾತಿ ಗಳಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಆರ್ಥಿಕವಾಗಿ ಸಬಲರಾಗಲು ವಿಶ್ವಕರ್ಮ, ಉಜ್ವಲ, ಆಯುಷ್ಮಾನ್ ಭಾರತ, ಮುದ್ರ ಯೋಜನೆಗಳು ದೇಶದ 25ಕೋಟಿಗಿಂತ ಹೆಚ್ಚು ಕುಟುಂಬಗಳು ಆರ್ಥಿಕವಾಗಿ ಸಬಲರಾದರು. 500ವರ್ಷಗಳ ಸತತ ಹೋರಾಟದ ಪ್ರತಿಫಲ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಲೋಕಾರ್ಪಣೆಯಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿರವರ ನೇತೃತ್ವ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರ ಸಂಘಟಿತ ಹೋರಾಟ, ಬಿಜೆಪಿ ಪಕ್ಷದ ಸಾಧನೆಗಳನ್ನು ಮನೆ, ಮನಗಳಿಗೆ ತಲುಪಿಸಿ, ರಾಜ್ಯದ 28ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲುವು ಪಡೆಯಲು ಶ್ರಮಿಸುವುದಾಗಿ ತಿಳಿಸಿದರು.ಮಾಜಿ ಜಿಲ್ಲಾಧ್ಯಕ್ಷರು, ಮಾಜಿ ಮಹಾನಗರ ಪಾಲಿಕೆ ಸದಸ್ಯರು, ಮಂಡಲ ಅಧ್ಯಕ್ಷರುಗಳು, ಬಿಜೆಪಿ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರುಗಳು ಭಾಗವಹಿಸಿದ್ದರು.