ಕನಕಪುರ: ನೇಗಿಲಯೋಗಿಸಮಾಜ ಸೇವಾ ಟ್ರಸ್ಟ್ ಕನಕಪುರ ತಾಲ್ಲೂಕು ಘಟಕದ ವತಿಯಿಂದ ನಗರದ ಎಂ.ಜಿ.ರಸ್ತೆಯಲ್ಲಿರುವ ಕಚೇರಿ ಯಲ್ಲಿ ಶನಿವಾರ ಮಾಸಿಕ ಸಭೆ ಯನ್ನು ನಡೆಸಲಾಯಿತು.
ಸಭೆಯಲ್ಲಿ ಭಾಗಿಯಾಗಿದ್ದ ಟ್ರಸ್ಟ್ನ ಪದಾಧಿಕಾರಿಗಳು ಸಂಘಟನೆಯ ಬಗ್ಗೆ ಚರ್ಚೆ ನಡೆಸಿ ತಾಲ್ಲೂಕಿನ ಪ್ರತಿ ಪಂಚಾಯ್ತಿಗಳಿಗೆ ಭೇಟಿ ನೀಡಿ ಪಂಚಾಯ್ತಿವ್ಯಾಪ್ತಿಯಲ್ಲಿ ಟ್ರಸ್ಟ್ನ ಸಭೆಗಳನ್ನು ನಡೆಸುವ ಮೂಲಕ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಂಡು ಅವರನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಂಚಾಯ್ತಿ ಮಟ್ಟದಲ್ಲಿ ನೂತನ ಘಟಕಗಳನ್ನು ಆರಂಭಿಸಲು ತಿರ್ಮಾನಿಸಿದರು.
ಒಕ್ಕಲಿಗ ಸಮುದಾಯದ ಜನತೆ ಯನ್ನು ಸಂಘಟನೆ ಮಾಡುವುದಲ್ಲದೆ ಆಸಕ್ತ ಯುವಕ ಯುವತಿಯರಿಗೆ ಟ್ರಸ್ಟನಲ್ಲಿ ಜವಾಬ್ದಾರಿಯನ್ನು ನೀಡಿ ಅವರುಹೆಚ್ಚು ಕ್ರಿಯಾಶೀಲರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಂತೆ ಸಲಹೆ ನೀಡಿದರು.ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನರೀತಿಯಲ್ಲಿ ನಡೆಸಲು ಕಾರ್ಯಕ್ರಮಗಳನ್ನು ರೂಪಿಸು
ವಂತೆ ಸಲಹೆ ನೀಡಿ ಪಂಚಾಯ್ತಿ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಸಿ ಹೊಸ ಚಂದದಾರರನ್ನು ಸೇರ್ಪಡೆಗೊಳಿಸಲ ರಸೀದಿ ಪುಸ್ತಕವನ್ನು ಪದಾಧಿಕಾರಿಗಳಿಗೆ ಸಭೆಯಲ್ಲಿ ನೀಡಲಾಯಿತು.
ಟ್ರಸ್ಟ್ನ ತಾಲ್ಲೂಕು ಘಟಕದ ಅಧ್ಯಕ್ಷ ಗಬ್ಬಾಡಿ ಕಾಡೇಗೌಡ, ಜಿಲ್ಲಾ ಉಪಾಧ್ಯಕ್ಷ ಚಿಕ್ಕರಂಗಯ್ಯ, ಕಾರ್ಯದರ್ಶಿ ಶಿವಲಿಂಗಯ್ಯ, ಪದಾಧಕಾರಿಗಳಾದ ಟಿ.ಎಂ.ರಾಮಯ್ಯ, ನಾಗರಾಜು, ಲಿಂಗೇಗೌಡ, ಸ್ವಾಮಿಗೌಡ, ಖಂಡೇಗೌಡ, ಮುದ್ದೇಗೌಡ, ಪುಟ್ಟೇಗೌಡ, ದೇವರಾಜು ಉಪಸ್ಥಿತರಿದ್ದರು.