ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಯುವತಿಯ ಎದುರು ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ಮಹದೇವಪುರ ಪಾರ್ಕ್ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಹದೇವಪುರ ಪಾರ್ಕ್ ಬಳಿ ಕಳೆದ ಜ.5 ರಂದು ಕಾರನ್ನು ನಿಲ್ಲಿಸಿಕೊಂಡು ಯುವತಿ ಕುಳಿತುಕೊಂಡಿದ್ದಾಗ ಕಾರಿನ ಮುಂಭಾಗದಲ್ಲಿ ಬಂದ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಡೋರ್ ಲಾಕ್ ಮಾಡಿದ್ದಾಳೆ. ಬಳಿಕ ಕಾರಿನ ಬಳಿ ಬಂದ ಅಪರಿಚಿತ ವ್ಯಕ್ತಿ ಕಾರಿನ ಸುತ್ತ ಓಡಾಡಿದ್ದಾನೆ.
ಭಯಭೀತಗೊಂಡ ಯುವತಿ ಕಾರಿನ ಸ್ಟೇರಿಂಗ್ ಕೆಳಗೆ ಅವಿತುಕೊಂಡಿದ್ದಾಳೆ. ಆಕೆಯ ಸ್ನೇಹಿತರೊಬ್ಬರು ಬಂದ ನಂತರ ಕಾರಿನ ಯುವತಿ ಕೆಳಗಿಳಿದಿದ್ದಾಳೆ. ತಾನು ಅನುಭವಿಸಿದ ಸಮಸ್ಯೆಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾಳೆ.