ಮನರಂಜನೆಗೆ ಜನಪ್ರಿಯವಾಗಿರುವ ಹಾಂಕಾAಗ್ ಸಿಕ್ಸಸ್ ೨೦೨೫ ಟೂರ್ನಿಯಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಅಭಿಯಾನವನ್ನು ಆರಂಭಿಸಿದೆ. ಶುಕ್ರವಾರದಂದು ಮೊಂಗ್ ಕಾಕ್ ಸ್ಟೇಡಿಯಂನಲ್ಲಿ ಮಳೆಯಿಂದಾಗಿ ಅಡಚಣೆಗೊಳಗಾದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ಭಾರತ ತಂಡ DLS (ಡಕ್ವರ್ತ್-ಲೂಯಿಸ್-ಸ್ಟರ್ನ್) ನಿಯಮದ ಅನ್ವಯ ೨ ರನ್ಗಳ ಗೆಲುವು ಪಡೆಯಿತು.
ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿದ ಪಾಕಿಸ್ತಾನ ತಂಡದ ಬೌಲರ್ ಗಳ ವಿರುದ್ಧ ಆರಂಭಿಕ ಬ್ಯಾಟರ್ ಗಳಾದ ಕರ್ನಾಟಕದ ರಾಬಿನ್ ಉತ್ತಪ್ಪ ಮತ್ತು ಭರತ್ ಚಿಪ್ಲಿ ಒತ್ತಡ ಹೇರಿದರು. ರಾಬಿನ್ ಉತ್ತಪ್ಪ ಅವರು ೧೧ ಎಸೆತಗಳಲ್ಲಿ ೨೮ ರನ್ ಗಳಿಸಿದರೆ, ಚಿಪ್ಲಿ ೧೩ ಎಸೆತಗಳಲ್ಲಿ ೨೪ ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಾಯಕ ದಿನೇಶ್ ಕಾರ್ತಿಕ್ ಅಜೇಯ ೧೭ ರನ್ ಗಳಿಸಿದರು. ಹೀಗಾಗಿ ಭಾರತ ತಂಡ ನಿಗದಿತ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೮೬ ರನ್ ಪೇರಿಸಿತು.
ಸ್ಟುವರ್ಟ್ ಬಿನ್ನಿ ಶಿಸ್ತಿನ ಬೌಲಿಂಗ್ ಈ ಮೊತ್ತವನ್ನು ಬೆಂಬತ್ತಿ ಹೊರಟ ಪಾಕಿಸ್ತಾನ ತಂಡ ೪೧/೧ ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದಾಗ ಮಳೆ ಬಂತು. DLS ನಿಯಮದ ಅನ್ವಯ ಭಾರತ ೨ ರನ್ಗಳ ಅಂತರದಿAದ ಗೆಲುವು ಸಾಧಿಸಿತು. ಸ್ಟುವರ್ಟ್ ಬೈನ್ನಿ ಅವರ ಶಿಸ್ತಿನ ಬೌಲಿಂಗ್ ಭಾರತಕ್ಕೆ ನೆರವಾಯಿತು. ಈ ಗೆಲುವು ಭಾರತಕ್ಕೆ ಸಿ ಬಣದಲ್ಲಿ ಮುನ್ನಡೆ ನೀಡಿದೆ. ಒಚ್ಚಾರೆ ಹೇಳಬೇಕು ಎಂದರೆ ಪಾಕಿಸ್ತಾನ ತಂಡದ ವಿರುದ್ಧ ಕರ್ನಾಟಕದ ಆಟಗಾರರೇ ಮಿಂಚಿದ್ದು ವಿಶೇಷವಾಗಿತ್ತು. ಬ್ಯಾಟಿಂಗ್ ನಲ್ಲಿ ರಾಬಿನ್ ಉತ್ತಪ್ಪ ಮತ್ತು ಭರತ್ ಚಿಪ್ಲಿ ಮಿಂಚಿದರೆ, ಬೌಲಿಂಗ್ ನಲ್ಲಿ ಸ್ಟುವರ್ಟ್ ಬಿನ್ನಿ ಶಿಸ್ತಿನ ಬೌಲಿಂಗ್ ನಡೆಸಿದರು.
ಕಳೆದ ವರ್ಷ ಐಪಿಎಲ್ ಗೆ ನಿವೃತ್ತಿ ಸಾರಿರುವ ದಿನೇಶ್ ಕಾರ್ತಿಕ್ ಅವರು ಹಾಂಕಾAಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿ ಬಣದಲ್ಲಿ ಆಸ್ಟೆçÃಲಿಯಾ ತಂಡ ಯುಎಇಯನ್ನು ೧೦ ವಿಕೆಟ್ಗಳಿಂದ ಸೋಲಿಸಿತು. ಜ್ಯಾಕ್ ವುಡ್ ೧೧ ಎಸೆತಗಳಲ್ಲಿ ೫೫ ರನ್ ಗಳಿಸಿ ಮಿಂಚಿದರು. ಎ ಬಣದ ಪಂದ್ಯದಲ್ಲಿ ಅಫ್ಘಾನಿಸ್ತಾನವು ದಕ್ಷಿಣ ಆಫ್ರಿಕಾ ತಂಡವನ್ನು ೪೯ ರನ್ಗಳಿಂದ ಸೋಲಿಸಿ ಅಚ್ಚರಿ ಮೂಡಿಸಿತು. ಅಫ್ಘಾನಿಸ್ತಾನದ ನಾಯಕ ಗುಲ್ಬದಿನ್ ನೈಬ್ ಕೇವಲ ೧೨ ಎಸೆತಗಳಲ್ಲಿ ೫೦ ರನ್ ಗಳಿಸಿ ಮಿಂಚಿದರು. ಕರೀಂ ಜನತ್ ಕೂಡ ಕೇವಲ ೧೧ ಎಸೆತಗಳಲ್ಲಿ ೪೬ ರನ್ ಗಳಿಸಿ ತಂಡದ ಮೊತ್ತವನ್ನು ೧೪೮೨ ಕ್ಕೆ ತಲುಪಿಸಿದರು. ದಕ್ಷಿಣ ಆಫ್ರಿಕಾ ತಂಡವು ೯೯೨ ರನ್ಗಳಿಗೆ ಸೀಮಿತವಾಯಿತು. ಡಿ ಬಣದ ಪಂದ್ಯದಲ್ಲಿ ಬಾಂಗ್ಲಾದೇಶ ಶ್ರೀಲಂಕಾವನ್ನು ೧೪ ರನ್ಗಳಿಂದ ಸೋಲಿಸಿತು. ನಾಯಕ ಅಕ್ಬರ್ ಅಲಿ ೯ ಎಸೆತಗಳಲ್ಲಿ ೩೨ ರನ್ ಗಳಿಸಿ ತಂಡಕ್ಕೆ ನೆರವಾದರು. ಆಸ್ಟೆçÃಲಿಯಾ ಮತ್ತು ಇಂಗ್ಲೆAಡ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಈ ಟೂರ್ನಿಯು ಇನ್ನೂ ೨ ದಿನಗಳ ಕಾಲ ನಡೆಯಲಿದೆ.



