ಚೆನ್ನೈ: ಹದಿಹರೆಯದ ಚೆಸ್ ತಾರೆ ಡಿ. ಗುಕೇಶ್ ಮತ್ತು ಹಾಲಿ ಚಾಂಪಿಯನ್ ಚೀನದ ಡಿಂಗ್ ಲಿರೆನ್ ನಡುವೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ ವಿಶ್ವ ಚೆಸ್ ಚಾಂಪಿಯನ್ಶಿಪ್ ಸ್ಪರ್ಧೆಯ ಆತಿಥ್ಯ ಹಕ್ಕನ್ನು ಪಡೆಯಲು ಭಾರತ ಬಿಡ್ ಸಲ್ಲಿಸಲಿದೆ ಎಂದು ನೂತನವಾಗಿ ಆಯ್ಕೆಯಾದ ಅಖೀಲ ಭಾರತ ಚೆಸ್ ಫೆಡರೇಶನ್ (ಎಐಸಿಎಫ್) ನ ಕಾರ್ಯದರ್ಶಿ ದೇವ್ ಪಟೇಲ್ ಹೇಳಿದ್ದಾರೆ.
17ನ ಹರೆಯದ ಗುಕೇಶ್ ಕಳೆದ ಸೋಮವಾರ ಟೊರೊಂಟೋದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಕೂಟದ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಪ್ರಶಸ್ತಿಗಾಗಿ ಸವಾಲು ನೀಡಲಿರುವ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡರು.
ವರ್ಷಾಂತ್ಯದಲ್ಲಿ ವಿಶ್ವ ಚೆಸ್ ಸ್ಫರ್ಧೆಯ ದಿನಾಂಕ ಮತ್ತು ತಾಣ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ.
ಫಿಡೆ ಜತೆ ನಡೆಸಲು ನಾವು ಮುಕ್ತರಾಗಿದ್ದೇವೆ. ವಿಶ್ವ ಚೆಸ್ ಸ್ಫರ್ಧೆಯಲು ಭಾರತದಲ್ಲಿ ನಡೆಯುವುದು ಅತ್ಯುತ್ತಮ ಸ್ಥಳ ಎಂದು ಗುಜರಾತ್ ಚೆಸ್ ಅಸೋಸಿಯೇಶನ್ನ ಅಧ್ಯಕ್ಷರೂ ಆಗಿರುವ ಪಟೇಲ್ ತಿಳಿಸಿದರು.