ಭಾರತೀಯ ಫುಟ್ಬಾಲ್ ತಂಡವು ಹನ್ನೆರಡು ವರ್ಷಗಳ ಬಳಿಕ AFC ಏಷ್ಯನ್ ಕಪ್ ೨೦೨೭ಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವುದು ಮುಜುಗರಕ್ಕೆ ಕಾರಣವಾಗಿದೆ. ಮಂಗಳವಾರ ಗೋವಾದಲ್ಲಿ ನಡೆದ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ ೨-೧ ಗೋಲುಗಳ ಅಂತರದಿAದ ಸೋಲುAಡ ಭಾರತ, ನಾಲ್ಕು ಪಂದ್ಯಗಳಿAದ ಕೇವಲ ಎರಡು ಅಂಕಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಹಾಂಗ್ ಕಾಂಗ್ ಮತ್ತು ಸಿಂಗಾಪುರ ತಲಾ ಎಂಟು ಅಂಕಗಳೊAದಿಗೆ ಮುಂದಿವೆ. ೨೦೧೯ ರಿಂದ ೨೪ ತಂಡಗಳ ಬೃಹತ್ ಪಂದ್ಯಾವಳಿಯಾಗಿ ವಿಸ್ತರಿಸಲ್ಪಟ್ಟ ನಂತರ ಭಾರತ ಇದರಲ್ಲಿ ಆಡಲು ಅರ್ಹತೆ ಗಿಟ್ಟಿಸಿಕೊಳ್ಳದಿರುವುದು ಇದೇ ಮೊದಲು.
ಪಂದ್ಯದ ಪ್ರಾರಂಭದಲ್ಲಿ ಭಾರತ ತಂಡ ಆಕ್ರಮಣಕಾರಿಯಾಗಿ ಆಡಿದರೂ ಅದರಿಂದ ಪ್ರಯೋಜನವಾಗಲಿಲ್ಲಿ. ೧೪ನೇ ನಿಮಿಷದಲ್ಲಿ ಲ್ಲಾಲ್ಜುವಾಲಾ ಛಾಂಗ್ಟೆ ಅವರ ಅದ್ಭುತ ಗೋಲಿನಿಂದಾಗಿ ಮುನ್ನಡೆ ಸಾಧಿಸಿತು. ಆದರೆ ಈ ಹಂತದಲ್ಲಿ ಒದಗಿದ್ದ ಕೆಲವು ಅವಕಾಶಗಳನ್ನು ಕೈಚೆಲ್ಲಿದ್ದು ತಂಡಕ್ಕೆ ದುಬಾರಿಯಾಗಿ ಕಾಡಿತು.
ಪ್ರಥಮಾರ್ಧದ ಅಂತ್ಯದಲ್ಲಿ ಸಿಂಗಾಪುರದ ಸಾAಗ್ ೪೪ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು. ೫೮ನೇ ನಿಮಿಷದಲ್ಲಿಸಾಂಗ್ ಅವರು ಮತ್ತೊಮ್ಮೆ ಗೋಲು ಬಾರಿಸಿ ಸಿಂಗಾಪುರಕ್ಕೆ ಮುನ್ನಡೆ ತಂದುಕೊಟ್ಟರು. ಭಾರತ ತಂಡಕ್ಕೆ ಅನೇಕ ಅವಕಾಶ ದೊರಕಿದರೂ ಅಂತಿಮ ಹAತದಲ್ಲಿ ಗೋಲು ಗಳಿಸಲು ವಿಫಲವಾದದ್ದು ಮುಳುವಾಯಿತು.
FIFA ಅರ್ಹತಾಸುತ್ತಿಗೂ ಅರ್ಹತೆಯಿಲ್ಲ ಈ ಮೂರನೇ ಸುತ್ತಿನ ಅರ್ಹತಾ ಪಂದ್ಯಗಳಿಗೆ ಮುನ್ನ ಭಾರತ ತಂಡವು ಈIಈಂ ವಿಶ್ವಕಪ್ ಅರ್ಹತಾ ಸುತ್ತಿನ ಎರಡನೇ ಸುತ್ತಿನಲ್ಲಿ ಏಷ್ಯನ್ ಕಪ್ಗೆ ಸ್ಥಾನ ಪಡೆಯುವ ಅವಕಾಶ ಹೊಂದಿತ್ತು. ಆದರೆ ಈಗ ಈ ರೀತಿಯ ಕಳಪೆ ಪ್ರದರ್ಶನದಿಂದಾಗಿ ಕತಾರ್ ಮತ್ತು ಕುವೈತ್ ನಂತರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಇನ್ನು ಎರಡನೇ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದಿದ್ದರೂ, ಭಾರತವು ಏಷ್ಯನ್ ಕಪ್ಗೆ ಮಾತ್ರವಲ್ಲದೆ FIFA ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೂ ಅರ್ಹತೆ ಪಡೆಯುತ್ತಿತ್ತು. ಆದರೆ ಈಗ ಅವರು ಏಷ್ಯನ್ ಕಪ್ ಆಡಲೂ ಅರ್ಹತೆ ಇಲ್ಲದಂತಾಗಿದೆ. ೨೦೨೭ರ ಆವೃತ್ತಿಯನ್ನು ಭಾರತ ಆಯೋಜಿಸಲು ಬಲವಾಗಿ ಪ್ರಯತ್ನಿಸಿತ್ತು, ಆದರೆ ೨೦೨೨ರ ಡಿಸೆಂಬರ್ನಲ್ಲಿ ತಮ್ಮ ಬಿಡ್ ಅನ್ನು ಹಿಂಪಡೆದುಕೊAಡಿತು, ಸೌದಿ ಅರೇಬಿಯಾ ಮಾತ್ರ ಏಕೈಕ ಬಿಡ್ಡರ್ ಆಗಿ ಉಳಿಯಿತು.
ಈ ಸೋಲು ಭಾರತದ ಫುಟ್ಬಾಲ್ ಕ್ರೀಡೆಯಲ್ಲಿ ಇನ್ನೂ ನಿಂತ ನೀರಾಗಿಯೇ ಇದೆ ಎಂಬುದಕ್ಕೆ ನಿದರ್ಶನವಾಗಿದೆ. ಭಾರತವು ೧೨ ವರ್ಷಗಳ ನಂತರ ಖಂಡಾAತರ ಪ್ರದರ್ಶನದಿಂದ ವAಚಿತವಾಗಿದೆ. ೨೦೧೫ ರಲ್ಲಿ ಕತಾರ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ಕೊನೇ ಬಾರಿಗೆ ಆಡಿತ್ತು. ಈ ಸೋಲಿನೊಂದಿಗೆ, ಭಾರತವು AFC ಏಷ್ಯನ್ ಕಪ್ ೨೦೨೭ ಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಭಾರತದ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ ಅವರು ಒಮ್ಮೆ ನಿವೃತ್ತಿ ಹೇಳಿದ್ದವರು ಮತ್ತೆ ಇದೀಗ ನಿವೃತ್ತಿ ಹಿಂಪಡೆದು ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಆದರೂ ಭಾರತ ಈ ರೀತಿ ಕಳಪೆ ಪ್ರದರ್ಶನ ನೀಡಿರುವುದು ನಿರಾಸೆಗೆ ಕಾರಣವಾಗಿದೆ.