ಅಭಿಷೇಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕ ಮತ್ತು ಕುಲ್ದೀಪ್ ಯಾದವ್ ಅವರ ಮಾರಕ ದಾಳಿಯ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶವನ್ನು
– ರನ್ ಗಳಿಂದ ಸೋಲಿಸಿ ಏಷ್ಯಾ ಕಪ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಒಂದನೇ ಪಂದ್ಯದಲ್ಲಿ ಶ್ರೀಲAಕಾವನ್ನು ಸೋಲಿಸಿ ಬೀಗುತ್ತಿದ್ದ ಬಾಂಗ್ಲಾದೇಶ ಇದೀಗ ಭಾರತದ ವಿರುದ್ಧ ಸೋಲನುಭವಿರುವ ಬಾಂಗ್ಲಾದೇಶ ತಂಡ ಗುರುವಾರ ಪಾಕಿಸ್ತಾನದ ವಿರುದ್ದ ನಡೆಯಲಿರುವ ತನ್ನ ಕೊನೆಯ ಸೂಪರ್ ೪ ಹಂತದ ಪಂದ್ಯದಲ್ಲಿ ಜಯ ಗಳಿಸಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಜೊತೆಗೆ ಪಾಕಿಸ್ತಾನಕ್ಕೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿರುವ ಹಿನ್ನೆಲೆಯಲ್ಲಿ ಇದೀಗ ಟೂರ್ನಿಯು ಕುತೂಹಲದ ಘಟ್ಟಕ್ಕೆ ತಲುಪಿದೆ. ಇದಕ್ಕೀಗ ಸೆಮಿಫೈನಲ್ ಪಂದ್ಯದ ಮಹತ್ವ ಲಭಿಸಿದೆ. ಈ ಪಂದ್ಯದಲ್ಲಿ ಗೆದ್ದವರು ೨೮ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೆಣೆಸಲಿದ್ದಾರೆ. ಇದೇ ವೇಳೆ ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಿದ್ದು ಶುಕ್ರವಾರ ಭಾರತದ ವಿರುದ್ಧ ನಡೆಯಲಿರುವ ಕೊನೆಯ ಸೂಪರ್ ಫೋರ್ ಹಂತದ ಪಂದ್ಯಕ್ಕೆ
ಕೇವಲ ಔಪಚಾರಿಕ ಪಂದ್ಯವಾಗಲಿದೆ. ದುಬೈ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಫೋರ್ಸ್ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ ೨೦ ಓವರ್ ಗಳಲ್ಲಿ ೬ ವಿರೆಟ್ ನಷ್ಟಕ್ಕೆ ೧೬೮ ರನ್ ಗಳಿಸಿತು. ಇದನ್ನು ಬೆಂಬತ್ತಿ ಹೊರಟ ಬಾಂಗ್ಲಾದೇಶ ತಂಡ ೧೯. ೩ ಓವರ್ ಗಳಲ್ಲಿ ೧೨೭ ರನ್ ಗಳನ್ನಷ್ಟೇ ಕಲೆ ಹಾಕಲು ಶಕ್ತವಾಯಿತು.
ಅಭಿಷೇಕ್ ಸಿಡಿಲಬ್ಬರದ ಬ್ಯಾಟಿಂಗ್ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಅವರು ಸ್ಫೋಟಕ ಆರಂಭ ನೀಡಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಇವರಿಬ್ಬರೂ ಬಾಂಗ್ಲಾ ದಾಳಿಯನ್ನು ಮನಸೋ ಇಚ್ಛೆ ದಂಡಿಸಿದ್ದರಿAದ ಇವರಿಬ್ಬರು ೫ ಓವರ್ ಮುಗಿಯುವ ಮುಂಚೆಯೇ ತಂಡದ ಮೊತ್ತವನ್ನು ೫೫ಕ್ಕೆ ತಲುಪಿಸಿದರು. ಪವರ್ ಪ್ಲೇನ ೬ ಓವರ್ ಮುಗಿಯುವ ಹೊತ್ತಿಗೆ ೭೬ ರನ್ ಗಳಿಸಿತ್ತು.
ಈ ಹಂತದಲ್ಲಿ ಸೆಟ್ ಬ್ಯಾಟರ್ ಶುಭಮನ್ ಗಿಲ್ ಅವರರನ್ನು ಹನ್ಸೀಮ್ ಹಸನ್ ಗೆ ಕ್ಯಾಚ್ಕೊಡಿಸುವಲ್ಲಿ ರಿಶಾದ್ ಹುಸೇನ್ ಯಶಸ್ವಿಯಾದರು. ಇದಾಗಿ ೫ ರನ್ ಗಳಿಸುವಷ್ಟರಲ್ಲೇ ಶಿವಂ ದುಬೈ ಅವರನ್ನೂ ರಿಶಾದ್ ಹುಸೇನ್ ಅವರು ಯಶಸ್ವಿ ಯಾದರು. ಮತ್ತೊಂದು ತುದಿಯಲ್ಲಿ ಅಭಿಷೇಕ್ ಶರ್ಮಾ ಅವರ ಆರ್ಭಟ ಮುಂದುವರಿದಿತ್ತು. ಕೇವಲ ೨೫ ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು ಅಂತಿಮವಾಗಿ ತಂಡದ ಮೊತ್ತ ೧೧೨ ಆಗಿದ್ದ ವೇಳೆ ರನೌಟ್ ಆದರು. ಇಲ್ಲಿಂದ ಬಳಿಕ ಬಾಂಗ್ಲಾದೇಶದ ಬೌಲರ್ ಗಳು ಬಿಗು ದಾಳಿ ನಡೆಸಿದರು. ಹೀಗಾಗಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ದೊಡ್ಡ ಮೊತ್ತದ ಕಡೆಗೆ ಸಾಧ್ಯವಾಗಲಿಲ್ಲ. ಹಾರ್ದಿಕ್ ಪಾಂಡ್ಯ ೨೯ ಎಸೆತದಲ್ಲಿ ೩೮ ರನ್ ಗಳಿಸಿದರು. ತಿಲಕ್ ವರ್ಮಾ(೫) ಮತ್ತು ಅಕ್ಷರ್ ಪಟೇಲ್ ಬಾಲ್ ವ್ಯರ್ಥ ಮಾಡಿದರೇ ಹೊರತು ತಮ್ಮ ಖ್ಯಾತಿಗೆ ತಕ್ಕಂತೆ ಆಡಲಿಲ್ಲ.