ವಿಶ್ವದ ನಂಬರ್ ಒನ್ ಟಿ೨೦ ತಂಡವಾಗಿರುವ ಭಾರತದ ವಿರುದ್ಧ ದಿಟ್ಟ ಆಟ ಪ್ರದರ್ಶಿಸಿದ ಕ್ರಿಕೆಟ್ ಶಿಶುಗಳಾದ ಒಮಾನ್ ತಂಡ ಪಂದ್ಯ ಸೋತರೂ ಎಲ್ಲರ ಮನಸ್ಸು ಗೆದ್ದಿದೆ. ಆಮಿರ್ ಕಲೀಂ ಮತ್ತು ಹಮೀದ್ ಮಿರ್ಝಾ ಅವರ ಹೋರಾಟದ ಬ್ಯಾಟಿಂಗ್ ನ ಹೊರತಾಗಿಯೂ ಶುಕ್ರವಾರ ಜತೀಂದರ್ ಸಿಂಗ್ ಬಳಗ ಟೀಂ
ಇAಡಿಯಾ ವಿರುದ್ಧ ೨೧ ರನ್ ಗಳಿಂದ ಪರಾಭವಗೊAಡಿತು. ಈ ಗೆಲುವಿನ ಮೂಲಕ ಭಾರತ ತಂಡ ಎ ಬಣದಿಂದ ಅಜೇಯವಾಗಿಸೂಪರ್ ೪ರ ಹಂತವನ್ನು
ಪ್ರವೇಶಿಸಿದೆ.
ಅಬುಧಾಬಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಎ ಬಣದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ ೨೦ ಓವರ್ ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೮೮ ರನ್ ಗಳಿಸಿತು. ಇದಕ್ಕುತ್ತರವಾಗಿ ಒಮಾನ್ ತಂಡ ೨೦ ಓವರ್ ಗಳು ಮುಗಿದಾಗ ೪ ವಿಕೆಟ್ ನಷ್ಟಕ್ಕೆ ೧೬೭ ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ಒಂದೊAದು ವಿಕೆಟ್ ಗೂ ಭಾರತದ ಬೌಲಿಂಗ್ ಪಡೆಯನ್ನು ಪರದಾಡುವಂತೆ ಮಾಡಿದ ಒಮಾನ್ ಬ್ಯಾಟಿಂಗ್ ಪಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಒಮಾನ್ ತಂಡದ ಆರAಭಿಕ ಬ್ಯಾಟರ್ ಗಳ ವಿಕೆಟ್ ಕೀಳಲು ಭಾರತ ತಂಡ ಬಹಳ ಪ್ರಯಾಸ ಪಡಬೇಕಾಯಿತು. ನಾಯಕ ಜತಿಂದರ್ ಸಿAಗ್ ಮತ್ತು ಆಮಿರ್ ಕಲೀಮ್ ಅವರು ಮೊದಲ ವಿಕೆಟ್ ಗೆ ೮.೩ ಓವರ್ ಗಳಲ್ಲಿ ೫೬ ರನ್ ಪೇರಿಸಿದರು. ಈ ಜೋಡಿಯನ್ನು ಬೇರ್ಪಡಿಸಿದ್ದು ಸ್ಪಿನ್ನರ್ ಕುಲ್ದೀಪ್ ಯಾದವ್. ಜತಿಂದರ್ ಸಿಂಗ್ ಅವರು ಔಟಾಗುವ ಮುನ್ನ ೧೫ ಎಸೆತಗಳಲ್ಲಿ ೩೮ ರನ್ ಗಳಿಸಿದರು.
ಸಂಜು ಸ್ಯಾಮ್ಸನ್ ಅರ್ಧಶತಕ ಇದಕ್ಕೂ ಮೊದಲು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡಿತು. ಉಪನಾಯಕ ಶುಭಮನ್ ಗಿಲ್ ಅವರು ಕೇವಲ ೫ ರನ್ ಮಾಡಿ ಶಾ ಫೈಝಲ್ ಅವರಿಗೆ ಕ್ಲೀನ್ ಬೌಲ್ಡ್ ಆದರು. ಬಳಿಕ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರು ಪವರ್ ಪ್ಲೇ ನಲ್ಲಿ ಒವರಿಗೆ ಹತ್ತು ರನ್ ಗಳಂತೆ ಗಳಿಸತೊಡಗಿದರು. ತಂಡದ ಮೊತ್ತ ೭೨ ಆಗಿದ್ದಾಗ ೩೮ ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಅವರು ಜಿತಿನ್ ರಾಮನಂದಿ ಅವರ ಬೌಲಿಂಗ್ ನಲ್ಲಿ ಕೀಪರ್ ವಿನಾಯಕ್ ಶುಕ್ಲಾ ಅವರಿಗೆ ಕ್ಯಾಚಿತ್ತು ಔಟಾದರು. ಅವರು ಕೇವಲ ೧೫ ಎಸೆತದಲ್ಲಿ ೫ ಬೌಂಡರಿ ಮತ್ತು ೨ ಸಿಕ್ಸರ್ ಗಳನ್ನು ಒಳಗೊಂಡ ೩೮ ರನ್ ಗಳಿಸಿದ್ದರು.