ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ ಶುಭಾರಂಭ ಮಾಡಿದ್ದ ಭಾರತ ತಂಡ ಇದೀಗ ಸತತ ಮೂರು ಸೋಲಿನ ಬಳಿಕ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಇಂಗ್ಲೆಂಡ್ ವಿರುದ್ಧ ೪ ರನ್ ಗಳ ಆಘಾತಕಾರಿ ಸೋಲಿನಿಂದಾಗಿ ಇದೀಗ ಮಾಡು ಇಲ್ಲವೇ ಮಡಿ ಎಂಬಂತಹ ಪರಿಸ್ಥಿತಿ
ನಿರ್ಮಾಣ ಆಗಿದೆ. ಸೆಮಿಫೈನಲ್ ಪ್ರವೇಶಿಸಬೇಕಾದರೆ ಲೀಗ್ ಹಂತದಲ್ಲಿ ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಭಾನುವಾರ ನಡೆದ ಲೀಗ್ ಹಂತದ ಪಂದ್ಯದಲ್ಲಿ ಗೆಲ್ಲಲು ೨೮೯ ರನ್ಗಳ ಗುರಿ ಬೆನ್ನಟ್ಟಿ ಹೊರಟಿದ್ದ ಭಾರತ ತಂಡ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿಮಂದಾನ ಅವರ ಉತ್ತಮ ಆಟದ ಹೊರತಾಗಿಯೂ ಅಂತಿಮ ಹಂತದಲ್ಲಿ ಎಡವಿತು. ೫೩ ಎಸೆತಗಳಲ್ಲಿ ೫೭ ರನ್ಗಳು ಬೇಕಿದ್ದಾಗ ಭಾರತದ ಕೈಯಲ್ಲಿ
೭ ವಿಕೆಟ್ ಗಳಿದ್ದವು. ಆದರೆ ಮಧ್ಯಮ ಕ್ರಮಾಂಕದ ಆಟಗಾರರ ನಿರ್ಲಕ್ಷ÷್ಯದಿಂದಾಗಿ ಸೋಲು ಅನುಭವಿಸಬೇಕಾಯಿತು. ಫಾರ್ಮ್ ಗೆ ಮರಳಿರುವ ಸ್ಮೃತಿ ಮಂದಾನ ೮೮ ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ವಿಫಲರಾದರು. ದೀಪ್ತಿ ಶರ್ಮಾ ಕೂಡ ೫೦ ರನ್ ಗಳಿಸಿ ತಂಡವನ್ನು ಗೆಲ್ಲಿಸಬಹುದಿದ್ದರೂ,
ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತರು. ಅಂತಿಮ ಹಂತದಲ್ಲಿ ನಿರಂತರವಾಗಿ ವಿಕೆಟ್ ಗಳು ಉರುಳುತ್ತಾ ಹೋಗಿದ್ದರಿಂದ ಇಂಗ್ಲೆಂಡ್ ತಂಡ ಸುಲಭವಾಗಿ ರನ್ ನಿಯಂತ್ರಣ ಮಾಡಿತು. ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ದೊಡ್ಡ ಮೊತ್ತಹಾಕಿಯೂ ಭಾರತ ತಂಡ ಎಡವಿತ್ತು. ೮ ತಂಡಗಳು ಪಾಲ್ಗೊಂಡಿರುವ ಈ ವಿಶ್ವ ಟೂರ್ನಿಯಲ್ಲಿ ಎಲ್ಲಾ ತಂಡಗಳೂ ಮತ್ತೊಂದು ತಂಡದೊಂದಿಗೆ ಲೀಗ್ ಹಂತದಲ್ಲಿ ಒಂದು ಬಾರಿ ಆಡುವ ಅವಕಾಶ ಪಡೆದಿದೆ. ಅಂದರೆ ಪ್ರತಿಯೊಂದು ತಂಡವೂ ಒಟ್ಟು ೭ ಲೀಗ್ ಪಂದ್ಯಗಳಲ್ಲಿ ಆಡಬೇಕಾಗಿದೆ. ಪ್ರತಿಯೊಂದು ತಂಡವೂ ಈವರೆಗೆ ೫ ಲೀಗ್ ಪಂದ್ಯಗಳನ್ನು ಆಡಿದ್ದು ಇನ್ನು ೨ ತಂಡಗಳಷ್ಟೇ ಬಾಕಿ ಉಳಿದಿವೆ.
ಅಂಕ ಪಟ್ಟಿಯ ಕಡೆಗೆ ಕಣ್ಣಾಡಿಸಿದಾಗ ೫ರಲ್ಲಿ ೪ ಪಂದ್ಯಗಳನ್ನು ಗೆದ್ದು ೮ ಅಂಕಗಳನ್ನು ಕಲೆಹಾಕಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾಗೆ ಸೆಮಿಫೈನಲ್ ಹಾದಿ ಸುಗಮವಾಗಿವೆ. ಆದರೆ ಕಠಿಣವಾಗಿರುವುದು ಭಾರತಕ್ಕೆ ಮಾತ್ರ. ಮೊದಲಭಾರಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಭಾರತ ತಂಡ ಪಾಕಿಸ್ತಾನ ವಿರುದ್ಧ ೨ನೇ ಪಂದ್ಯವನ್ನು ಸಹ ಜಯಿಸಿದ್ದು ಆದರೆ ಆ ಬಳಿಕ ದಕ್ಷಿಣ ಆಫ್ರಿಕಾ,ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರದ್ಧ ಸೋಲು ಅನುಭವಿಸಿದೆ.