ಓವಲ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಸೈಂಟ್ ಜಾರ್ಜ್ ಓವಲ್ ಮೈದಾನದಲ್ಲಿ ನಡೆಯಲಿದೆ.
ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ಟಾಸ್ ಕೂಡಾ ನಡೆಯದೇ ಪಂದ್ಯ ರದ್ದು ಮಾಡಬೇಕಾಗಿ ಬಂದಿತ್ತು.ಟೀಂ ಇಂಡಿಯಾ ಇಲ್ಲಿಗೆ ಕಾಲಿಟ್ಟಾಗಲೇ ಮಳೆಯ ಸ್ವಾಗತ ಸಿಕ್ಕಿತ್ತು. ಇದೀಗ ಎರಡನೇ ಪಂದ್ಯಕ್ಕೂ ಮಳೆಯ ಭೀತಿಯಿದೆ.ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಪಡೆಗೆ ಇದು ಮೊದಲ ವಿದೇಶೀ ಸರಣಿ. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಗೆದ್ದು ಬೀಗಿದ್ದ ಸೂರ್ಯ ಪಡೆಗೆ ಈಗ ಆಫ್ರಿಕಾ ನಾಡಿನಲ್ಲಿ ಗೆಲ್ಲುವ ತವಕವಿತ್ತು.
ಆದರೆ, ಮಳೆಯ ಭೀತಿ ಪಂದ್ಯಕ್ಕೆ ಕಾಡಿದೆ. ಇದೀಗ ಸರಣಿಯಲ್ಲಿ ಎರಡೇ ಪಂದ್ಯ ಬಾಕಿಯುಳಿದಿದೆ. ಒಂದು ವೇಳೆ ಸರಣಿ ಗೆಲ್ಲಬೇಕಾದರೆ ಯಾವುದೇ ತಂಡವಾದರೂ ಎರಡೂ ಪಂದ್ಯಗಳನ್ನು ಗೆಲ್ಲಬೇಕಿದೆ. ಒಂದರಲ್ಲಿ ಸೋತರೂ ಸರಣಿ ಸಮಬಲವಾಗಲಿದೆ. ಭಾರತೀಯ ಕಾಲಮಾನ ಪ್ರಕಾರ ಈ ರಾತ್ರಿ 8.30 ಕ್ಕೆ ಆರಂಭವಾಗಲಿದೆ. ಸ್ಪೋರ್ಟ್ಸ್ 18 ವಾಹಿನಿ ಅಥವಾ ಜಿಯೋ ಸಿನಿಮಾದಲ್ಲಿ ನೇರಪ್ರಸಾರವಿರಲಿದೆ.