This is the title of the web page
This is the title of the web page

ಪಾಕ್ ವಲಸಿಗರಿಗೆ ಭಾರತದ ಪೌರತ್ವ!

ನವದೆಹಲಿ: ಗುಜರಾತ್‍ನಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿರುವ 108 ಮಂದಿಗೆ ಭಾರತದ ಪೌರತ್ವ ನೀಡಲಾಗುವುದು ಎಂದು ಕೇಂದ್ರ ಸಚಿವ ಹರ್ಷ ಸಂಘವಿ ತಿಳಿಸಿದ್ದಾರೆ.

2016 ಮತ್ತು 2018ರ ಗೆಜೆಟ್ ಅಧಿಸೂಚನೆಗಳು ಅಹಮದಾಬಾದ್, ಗಾಂಧಿನಗರ ಮತ್ತು ಗುಜರಾತ್‍ನ ಕಚ್‍ನ ಜಿಲ್ಲಾಧಿಕಾರಿಗಳಿಗೆ ಪೌರತ್ವ ಕಾಯ್ದೆಯಡಿಯಲ್ಲಿ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವವನ್ನು ನೀಡಲು ಅಧಿಕಾರ ನೀಡಲಾಗುತ್ತದೆ.

ಅಹಮದಾಬಾದ್ ಜಿಲ್ಲಾಧಿಕಾರಿ ಕಚೇರಿಯಿಂದ ಇಲ್ಲಿಯವರೆಗೆ ಸುಮಾರು 1 ಸಾವಿರದ 149 ಪಾಕಿಸ್ತಾನಿ ಹಿಂದೂ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇಂದು ಈ ಸಂದರ್ಭದಲ್ಲಿ ಅಹಮದಾಬಾದ್‍ನ ಜಿಲ್ಲಾಧಿಕಾರಿ ಶ್ರೀಮತಿ ಪ್ರವೀಣಾ ಡಿಕೆ, ಅಹಮದಾಬಾದ್‍ನ ಶಾಸಕರು, ಸಿಂಧ್ ಅಲ್ಪಸಂಖ್ಯಾತ ವಲಸಿಗರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, 108 ಫಲಾನುಭವಿಗಳು ಮತ್ತು ಅವರ ಕುಟುಂಬ ಸದಸ್ಯರು ಉಪಸ್ಥಿತರಿರಲಿದ್ದಾರೆ.

ಕಳೆದ 5 ವರ್ಷಗಳಲ್ಲಿ ಭಾರತೀಯ ಪೌರತ್ವವನ್ನು ಪಡೆದಿರುವ ಶೇ.87 ರಷ್ಟು ಅರ್ಜಿದಾರರು ಪಾಕಿಸ್ತಾನದಿಂದ ಬಂದವರು ಎಂಬ ಮಾಹಿತಿಯನ್ನು ಗೃಹ ಸಚಿವಾಲಯ ಈ ಹಿಂದೆ ತಿಳಿಸಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡಿರುವ ಇಲಾಖೆ, ಕಳೆದ 5 ವರ್ಷಗಳಲ್ಲಿ 5,220 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಅವರಲ್ಲಿ 4,552 (ಶೇ.87) ಹೊಸ ನಾಗರಿಕರು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ಮಾಹಿತಿ ನೀಡಿತ್ತು.