ಜಕಾರ್ತ: ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್ನಲ್ಲಿ ಭಾರತದ ಶೂಟರ್ಗಳು ಪುರುಷರ 10 ಮೀಟರ್ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಭಾರತದ ವರುಣ್ ತೋಮರ್ (586), ಅರ್ಜುನ್ ಸಿಂಗ್ ಚೀಮಾ (579) ಮತ್ತು ಉಜ್ಜವಲ್ ಮಲಿಕ್ (575) ಒಟ್ಟು 1740 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಇರಾನ್ ಮತ್ತು ಕೊರಿಯಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡವು.
ಇದರ ಜೊತೆಗೆ ವರುಣ್ ಮತ್ತು ಅರ್ಜುನ್ ಅವರುಗಳು ವೈಯಕ್ತಿಕ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ಗಾಗಿ ಒಟ್ಟು 16 ಕೋಟಾ ಸ್ಥಳಗಳು ಕಾಂಟಿನೆಂಟಲ್ ಶೋಪೀಸ್ನಲ್ಲಿ ಲಭ್ಯವಿದೆ.
ಪುರುಷರು ಮತ್ತು ಮಹಿಳೆಯರಿಗಾಗಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳು ಭಾರತೀಯ ಶೂಟರ್ಗಳಿಗೆ ಗರಿಷ್ಠ ಮೂರು ಕೋಟಾಗಳನ್ನು ನೀಡುತ್ತವೆ.