ಇಂಡಿಯನ್ ವೆಲ್ಸ್ (ಯುಎಸ್‍ಎ): ಭಾರತದ ರೋಹನ್ ಬೋಪಣ್ಣ ಆಸ್ಟ್ರೇಲಿಯದ ಮ್ಯಾಟ್ ಎಬೆxನ್ ಜತೆಗೂಡಿ `ಇಂಡಿಯನ್ ವೆಲ್ಸ್’ ಟೆನಿಸ್ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಇದರೊಂದಿಗೆ ಎಟಿಪಿ ಮಾಸ್ಟರ್ 1000 ಚಾಂಪಿಯನ್ ಎನಿಸಿದ ಅತೀ ಹಿರಿಯ ಟೆನಿಸಿಗನೆಂಬ ದಾಖಲೆಗೆ ಪಾತ್ರರಾದರು.
43 ವರ್ಷದ ರೋಹನ್ ಬೋಪಣ್ಣ ಹಾಗೂ 35 ವರ್ಷದ ಮ್ಯಾಟ್ ಎಬೆxನ್ ಸೇರಿಕೊಂಡು ಅಗ್ರ ಶ್ರೇಯಾಂಕದ ವೆಸ್ಲಿ ಕೂಲೋಫ್ (ನೆದರ್ಲೆಂಡ್ಸ್)-ನೀಲ್ ಸ್ಕಪ್‍ಸ್ಕಿ (ಬ್ರಿಟನ್) ಜೋಡಿಯನ್ನು ಪ್ರಬಲ ಹೋರಾಟದಲ್ಲಿ 6-3, 2-6, 10-8 ಅಂತರದಿಂದ ಹಿಮ್ಮೆಟ್ಟಿಸಿದರು. ಇದು ಬೋಪಣ್ಣ ಅವರ 10ನೇ ಎಟಿಪಿ ಮಾಸ್ಟರ್ 1000 ಫೈನಲ್ ಆಗಿತ್ತು.
ಈ ವೇಳೆ ರೋಹನ್ ಬೋಪಣ್ಣ ಕೆನಡಾದ ಡೇನಿಯಲ್ ನೆಸ್ಟರ್ ದಾಖಲೆಯನ್ನು ಮುರಿದರು. 2015ರಲ್ಲಿ ಸಿನ್ಸಿನಾಟಿ ಮಾಸ್ಟರ್ ಚಾಂಪಿಯನ್ ಆದಾಗ ಅವರಿಗೆ 42 ವರ್ಷವಾಗಿತ್ತು. ಇದು ರೋಹನ್ ಬೋಪಣ್ಣ ಜಯಿಸಿದ 5ನೇ ಮಾಸ್ಟರ್ 1000 ಡಬಲ್ಸ್ ಪ್ರಶಸ್ತಿ. 2017ರಲ್ಲಿ ಕೊನೆಯ ಸಲ ಮಾಂಟೆ ಕಾರ್ಲೊದಲ್ಲಿ ಚಾಂಪಿಯನ್ ಆಗಿದ್ದರು.
Leave a Review