ಸಾಂಟಿಯಾಗೊ: ಭಾರತೀಯ ವನಿತಾ ತಂಡವು ಎಫ್ ಐಎಚ್ ವನಿತಾ ಜೂನಿಯರ್ ಹಾಕಿ ವಿಶ್ವಕಪ್ ಕೂಟದಲ್ಲಿ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಅನ್ನು, ಮಮ್ತಾಜ್ ಖಾನ್ ಮತ್ತು ದೀಪಿಕಾ ಸೊರೆಂಗ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿ ನಿಂದ ಭಾರತ ತಂಡವು ಮೊದಲ ಪಂದ್ಯದಲ್ಲಿ ಕೆನಡ ತ,ಡವನ್ನು 12-0 ಗೋಲುಗಳಿಂದ ಸೋಲಿಸಿ ಸಂಭ್ರಮಿಸಿದೆ.
ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಭಾರತ ಪಂದ್ಯದ ಆರಂಭವಾದ ನಾಲ್ಕನೇ ನಿಮಿಷ ದಲ್ಲಿ ಗೋಲು ಖಾತೆ ತೆರೆದಿತ್ತು. 3ನೇ ಕ್ವಾರ್ಟರ್ನಲ್ಲಿ 4 ಗೋಲು ಹೊಡೆದು ಸಂಭ್ರಮಿಸಿ ಮುನ್ನಡೆಯನ್ನು 8-0ಕ್ಕೇರಿಸಿತು.ಭಾರತ ಶುಕ್ರವಾರ ನಡೆಯುವ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ.